ಬಂಟ್ವಾಳ ದ ಯುವತಿಯ ಪೊಟೋ ಹಾಕಿ Youtube ನಲ್ಲಿ " ರಾತ್ರಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಖ್ಯಾತ ಸ್ವಾಮೀಜಿ " ಎಂಬ ವಿಡಿಯೋ ಹಾಕಿದ ದಂಪತಿ ಅರೆಸ್ಟ್
Tuesday, February 1, 2022
ಮಂಗಳೂರು: Youtube ಚಾನಲ್ ನಲ್ಲಿ ಬ್ರೇಕಿಂಗ್ ನ್ಯೂಸ್ ಎಂಬ ಹೆಸರನ್ನು ಕೊಟ್ಟು ಪೂಜೆಯ ಹೆಸರಿನಲ್ಲಿ ಇಡೀ ರಾತ್ರಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಖ್ಯಾತ ಸ್ವಾಮೀಜಿ ಎಂಬ ಸುದ್ದಿಯನ್ನು ಪ್ರಕಟಿಸಿ ಅದರಲ್ಲಿ ಈ ವಿಚಾರಕ್ಕೆ ಸಂಬಂಧವೆ ಇಲ್ಲದ ಬಂಟ್ವಾಳ ದ ಯುವತಿಯೊಬ್ಬಳ ಪೊಟೋ ಹಾಕಿದ ದಂಪತಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
YouTube ನ್ಯೂಸ್ ಚಾನಲ್ ಲಿಂಕ್ ನಲ್ಲಿ ನಕಲಿ ಹರ್ಷದ್ ಬಾಬಾ ಎಂಬ ಸ್ವಾಮೀಜಿ ಚಿಕಿತ್ಸೆ ಹೆಸರಿನಲ್ಲಿ ಅತ್ಯಾಚಾರ ನಡೆಸಿರುತ್ತಾನೆ ಎಂಬಂತೆ ವರದಿಯನ್ನುಮಾಡಿದ್ದಾರೆ. ಈ ವಿಡಿಯೋ ದಲ್ಲಿ ಬಂಟ್ವಾಳ ದ ಯುವತಿ ಪೂಜೆ ಕೆಲಸವನ್ನು ಮಾಡುವ ಭಾವಚಿತ್ರಗಳನ್ನು ಪ್ರಕಟಿಸಿದ್ದರು. ಈ ವಿಡಿಯೋಗಳನ್ನು ಪ್ರಕಟಿಸಿ ಯುವತಿಯ ಮಾನಹಾನಿ ಉಂಟು ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ತಂದೆ ದೂರು ನೀಡಿದ್ದರು.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣಾ ಅ. ಕ್ರ 09/2022 ಕಲಂ 509 ಐಪಿಸಿ ಅಡಿ ಪ್ರಕರಣ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಟೋ ದುರುಪಯೋಗ ಮಾಡಿದ್ದ ಯೂಟ್ಯೂಬ್ ಚಾನೆಲ್ ಮಾಲೀಕರಾದ ಶಿವಮೊಗ್ಗ ಜಿಲ್ಲೆಯ ಅನುಷ ಮತ್ತು ಹರೀಶ್ ಎಂಬುವವರನ್ನು ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.