MANGALORE

ಮಂಗಳೂರಿನಲ್ಲಿ ಮರುವಾಯಿ ಪದಾರ್ಥ ತಿಂದು ಹಲವರು ಅಸ್ವಸ್ಥ

ಮಂಗಳೂರು; ಮರುವಾಯಿ ಮೀನು ಪದಾರ್ಥ ತಿಂದು ಹಲವರು ಅಸ್ವಸ್ಥಗೊಂಡ ಘಟನೆ ಮಂಗಳೂರಿನ ಪೊಳಲಿ , ಗಂಜಿಮಠ , ಕುಪ್ಪೆಪದವು , ಕುಲ ವೂರು ಮತ್ತು ಮುತ್ತೂರು ಪರಿಸರದಲ್ಲಿ ಕಳೆದ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ಮರುವಾಯಿ ಮೀನು  ಪದಾರ್ಥ ಮಾಡಿ ತಿಂದವರಿಗೆ ತಲೆ ಸುತ್ತು ಬಂದು ಹಲವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ಥಳೀಯ ಮೀನು ಮಾರಾಟಗಾರರಿಂದ ಖರೀದಿಸಿದ್ದಮರುವಾಯಿ‌ ಮೀನನ್ನು  ಪದಾರ್ಥ ಮಾಡಿ ತಿಂದ ಹೆಚ್ಚಿನವರು ಅಸ್ವಸ್ಥಗೊಂಡಿದ್ದರು . ಮರುವಾಯಿ ಪದಾರ್ಥ ಸೇವಿಸಿದ ಕೆಲವೇ ಹೊತ್ತಿನಲ್ಲಿ ತಲೆ ಸುತ್ತು ಬರುವುದು,  ಕಣ್ಣುಗಳು ಮಂಜಾಗಿ ಕಣ್ಣು ತೆರೆಯಲು ಅಸಾಧ್ಯವಾದದ್ದು,  ಹೊಟ್ಟೆನೋವು ಮೊದಲಾದವು ಕಾಣಿಸಿಕೊಂಡಿತ್ತು . 

 ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ
  ಮರುವಾಯಿ ಪದಾರ್ಥ ಸೇವನೆ ಯಿಂದ ಅಸ್ವಸ್ಥಗೊಳ್ಳಲು  ಮೀನು ಕೆಡದಂತೆ ಸಂರಕ್ಷಿಸಲು ಬಳಸುವ ರಾಸಾಯನಿಕ ಬಳಸಿದ್ದೆ ಕಾರಣ ಎಂದು ಹೇಳಲಾಗುತ್ತಿದೆ.


ಟ್ಯಾಗ್‌ಗಳು: MANGALORE