
ಮುಸ್ಲಿಂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಬುಲ್ಲಿಬಾಯಿ App ಪ್ರಕರಣ- ಬೆಂಗಳೂರಿನ ವಿದ್ಯಾರ್ಥಿ ವಶಕ್ಕೆ
ಬೆಂಗಳೂರು; ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ 'ಬುಲ್ಲಿ ಬಾಯಿ' App ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ
ಆರೋಪಿ ವಿದ್ಯಾರ್ಥಿಯ ವಿರುದ್ಧ IPC ಮತ್ತು IT ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯ ಕುರಿತು ಬೇರೆ ಯಾವುದೇ ಮಾಹಿತಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ.
ಬಂಧಿತ ವಿದ್ಯಾರ್ಥಿಯನ್ನು ಮುಂಬಯಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.
ಬುಲ್ಲಿ ಬಾಯ್ ಇಂದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಇದು ಗೂಗಲ್ ಪ್ಲೇಸ್ಟೋರ್ ರೀತಿಯ ಮತ್ತೊಂದು ಪ್ಲಾಟ್ಫಾರ್ಮ್ GitHub ನಲ್ಲಿ ದೊರೆಯುತ್ತದೆ. ಈ App ನಲ್ಲಿ ಮುಸ್ಲಿಂ ಮಹಿಳೆಯರ ತಿರುಚಲಾದ ಫೋಟೋಗಳನ್ನು upload ಮಾಡಲಾಗುತ್ತಿತ್ತು ಎಂದು ಪತ್ರಕರ್ತೆಯೊಬ್ಬರು ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡ ಬಳಿಕ ಪ್ರಕರಣ ಭಾರಿ ಸದ್ದು ಮಾಡಿದೆ.
ಈ App ನಲ್ಲಿ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು ncp ನಾಯಕ ಮತ್ತು ಮಹಾರಾಷ್ಟ್ರದ ನವಾಬ್ ಮಲಿಕ್ ಈ ಬಗ್ಗೆ ಗೃಹ ಇಲಾಖೆಗೆ ದೂರು ನೀಡುವುದಾಗಿ ಹೇಳಿದ್ದರು. ಮತ್ತೊಂದೆಡೆ ಪೊಲೀಸರು ಈ App ಅನ್ನು ಪ್ರಮೋಟ್ ಮಾಡುವ ಟ್ವಿಟರ್ ಹ್ಯಾಂಡಲ್ಗಳ ಮೇಲೆ ದೂರನ್ನು ದಾಖಲಿಸಿದ್ದರು.