ಹೊಸ ವರ್ಷ ಸಂಭ್ರಮ ಮುಗಿಸಿ ವಾಪಾಸು ಬರುತ್ತಿದ್ದ ಯುವತಿಯರ ಅತ್ಯಾಚಾರ- video ಮಾಡಿ ಬೆದರಿಕೆ
ಆಂಧ್ರಪ್ರದೇಶ:
ಹೊಸ ವರ್ಷದ ಸಂಭ್ರಮ ಮುಗಿಸಿ ವಾಪಾಸಾಗುತ್ತಿದ್ದ ಇಬ್ಬರು ಅಪ್ರಾಪ್ತ ವಯಸ್ಕ ಯುವತಿಯರನ್ನು
ತಾನು
ಪೊಲೀಸ್ ಅಧಿಕಾರಿ ಎಂದು ಬೆದರಿಸಿ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ
ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದಿದೆ.
ಪ್ರಕರಣ ಸಂಬಂಧ
35 ವರ್ಷದ ರಾಮ್ಬಾಬು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷದ ದಿನ
ಇಬ್ಬರು ಅಪ್ರಾಪ್ತ ವಯಸ್ಕಬಾಲಕಿಯರು ಹೊಸ
ವರ್ಷದ ಸಂಭ್ರಮದಲ್ಲಿ ಭಾಗಿಯಾಗಿ ವಾಪಸ್
ಬರುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಈ ದುಷ್ಕೃತ್ಯವೆಸಗಿದ್ದಾನೆ.
ಇಬ್ಬರು
ಬಾಲಕಿಯರು ತಮ್ಮ ಸ್ನೇಹಿತರೊಂದಿಗೆ ಹೊಸ ವರ್ಷದಂದು
ಪಿಕ್ನಿಕ್ಗಾಗಿ ವಟ್ಟಿಗೆದ್ದ ಜಲಾಶಯಕ್ಕೆ ತೆರಳಿ, ಅಲ್ಲಿಂದ ಹಾಸ್ಟೆಲ್ಗೆ ಹಿಂತಿರುಗುತ್ತಿದ್ದ ವೇಳೆ
ಆರೋಪಿ ತಾನು
ಪೊಲೀಸ್ ಅಧಿಕಾರಿಯೆಂದು ನಂಬಿಸಿ ಇಬ್ಬರನ್ನು ಬೇರೆಡೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಅತ್ಯಾಚಾರ
ಮಾಡಿದ ಬಳಿಕ ತನ್ನ ವಿರುದ್ಧ
ದೂರು ನೀಡಿದರೆ ವಿಡಿಯೋವನ್ನು
ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.
ಈ ಬಗ್ಗೆ ಬಾಲಕಿಯರು ದೂರು ನೀಡಿದ ಬಳಿಕ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.