ನೀರು ಸೇವನೆಗೆ ಸೂಕ್ತ ಸಮಯ ಯಾವುದು ಗೊತ್ತಾ..??
Saturday, December 18, 2021
ತಜ್ಞರ ಪ್ರಕಾರ ಪುರುಷರು ದಿನಕ್ಕೆ 3.5 ಲೀ ನೀರನ್ನು ಸೇವಿಸಬೇಕು ಹಾಗೂ ಮಹಿಳೆಯರು2.5 ಲೀ ನೀರನ್ನು ಸೇವಿಸಬೇಕು ಎನ್ನುತ್ತಾರೆ.ಹಾಗಾದರೆ ನೀರು ಸೇವನೆಗೆ ಸೂಕ್ತ ಸಮಯ ಯಾವುದು ಗೊತ್ತಾ..??
ನಿರಂತರ 7-9ರಿಂದ ಗಂಟೆಗಳ ನಿದ್ದೆಯ ಬಳಿಕ ಬೆಳಗ್ಗೆ ನೀರಿನ ಸೇವನೆಯಿಂದ ದೇಹ ಶುದ್ಧಗೊಳ್ಳುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ನೀರಿನ ಸೇವನೆ ಉತ್ತಮ ಅಭ್ಯಾಸವಾಗಿದೆ.
ವ್ಯಾಯಾಮದ ಬಳಿಕ
ವ್ಯಾಯಾಮ ಅಥವಾ ಜಿಮ್ ವರ್ಕೌಟ್ ಬಳಿಕ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಸಂಪೂರ್ಣವಾಗಿ ಕಳೆದುಹೋಗಿರುತ್ತದೆ. ಆದ್ದರಿಂದ ನಿಮ್ಮ ವರ್ಕೌಟ್ ಬಳಿಕ ದೇಹಕ್ಕೆ ಬೇಕಾದಷ್ಟು ನೀರು ನೀಡಿ.
ಊಟದ ಮೊದಲು
ಊಟಕ್ಕೆ ಮೊದಲು ನೀರಿನ ಸೇವನೆ ನಿಮ್ಮ ಅತಿಯಾದ ತೂಕ ಇಳಿಕಗೆ ಸಹಾಯಕವಾಗಿದೆ. ಇದನ್ನು ಪ್ರಿಲೋಡಿಂಗ್ ಎಂದು ಕರೆಯುತ್ತಾರೆ. ಹೀಗಾಗಿ ಊಟಕ್ಕೂ ಮೊದಲು ನೀರಿನ ಸೇವನೆ ಉತ್ತಮ.
ರಾತ್ರಿ
ಮಲಗುವ ಮೊದಲು ಸ್ವಲ್ಪವಾದರೂ ನೀರನ್ನು ಕುಡಿಯಿರಿ. ಅದು ನಿಮ್ಮನ್ನು ಆರಾಮದ ನಿದ್ದೆಗೆ ಎಳೆದೊಯ್ಯಲಿದೆ. ದೇಹ ನಿರ್ಜಲೀಕರಣಗೊಂಡಷ್ಟು ನಿದ್ದೆಗೆ ಕಿರಿಕಿರಿಯಾಗಬಹುದು. ಅಲ್ಲದೆ ದೇಹದ ಉಷ್ಣತೆ ಜಾಸ್ತಿಯಾಗಿ ತಲೆನೋವಿನಂತಹ ಸಮಸ್ಯೆಗಳು ಉಲ್ಬಣಿಸಬಹುದು.
ಇತರ ಸಮಯಗಳು
ಈ ಮೇಲೆ ತಿಳಿಸಿದ ಸಮಯಗಳಲ್ಲಿ ಅವಶ್ಯವಾಗಿ ನೀರು ಸೇವಿಸಿ. ಅದನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲೂ ನೀರು ದೇಹಕ್ಕೆ ಅವಶ್ಯಕವಾಗಿರುತ್ತದೆ.