-->

ತಾನು ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಚುಚ್ಚಿ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ!

ತಾನು ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಚುಚ್ಚಿ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ!

  

ಕೋಯಿಕ್ಕೋಡ್: ಯುವತಿಯೊಬ್ಬಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ತಾನೂ ಚಾಕುವಿನಿಂದ ಚುಚ್ಚಿಕೊಂಡು ಬೆಂಕಿ ಹಚ್ಚಿ ಭಗ್ನ ಪ್ರೇಮಿ ನಂದಕುಮಾರ್ ಎಂಬಾತ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.ಕೇರಳದ ಕೋಯಿಕ್ಕೋಡಿನ ತಿಕ್ಕೋಡಿಯ ಪಳ್ಳಿತಾಳಂ ನಿವಾಸಿ ಮೋಹನನ್ ಎಂಬವರ ಪುತ್ರ ನಂದಕುಮಾರ್ ಎಂಬಾತ ​ ಕೃಷ್ಣಪ್ರಿಯಾ ಎಂಬ ಯುವತಿಯನ್ನು ಪ್ರೀತಿಸುವಂತೆ ಕಾಡುತ್ತಿದ್ದನು. ಆದರೆ ಕೃಷ್ಣಪ್ರಿಯಾ ನಂದಕುಮಾರ್​ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸುತ್ತಲೇ ಬಂದಿದ್ದಾಳೆ .


ಬಿಎಸ್​ಸಿ ಕಂಪ್ಯೂಟರ್ ಸೈನ್ಸ್​​​ ಪದವಿ ಮುಗಿಸಿರುವ ಕೃಷ್ಣಾಪ್ರಿಯಾಗೆ ಕಳೆದ ನಾಲ್ಕು ದಿನಗಳ ಹಿಂದೆ ತಿಕ್ಕೋಡಿ ಗ್ರಾಮಪಂಚಾಯತ್​ ಕಚೇರಿಯಲ್ಲಿ ಕೆಲಸ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ಆಕೆ ಕೆಲಸಕ್ಕೆ ಹೋಗಿದ್ದಾಳೆ. 10 ಗಂಟೆಯ ಸುಮಾರಿಗೆ ನಂದಕುಮಾರ್​ ಪಂಚಾಯತ್​ ಕಚೇರಿಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ  ಅವರ ಮಧ್ಯೆ ಜಗಳವಾಗಿದೆ. ಕೋಪಗೊಂಡ ನಂದು ಕೃಷ್ಣಪ್ರಿಯಾಗೆ ಮೊದಲು ಚಾಕುವಿನಿಂದ ಚುಚ್ಚಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.ಇನ್ನು ತಾನು ತಂದಿದ್ದ ಚಾಕುವಿನಿಂದ ತನಗೂ ಚುಚ್ಚಿಕೊಂಡಿದ್ದಾನೆ. ಬಳಿಕ ನಂದಕುಮಾರ್​ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

 

ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಪಂಚಾಯತ್​ ಕಚೇರಿಗೆ ತೆರಳಿದ್ದು ಬಳಿಕ ಇಬ್ಬರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು  ಸ್ಥಳೀಯರು  ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕೃಷ್ಣಪ್ರಿಯಾ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ.  ತೀವ್ರ  ಸುಟ್ಟಗಾಯಗಳಿಂದ ಬಳಲುತ್ತಿದ್ದ ನಂದ ಕುಮಾರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಇಂದು ಬೆಳಗ್ಗೆ ನಂದ ಕುಮಾರ್ ಸಾವನ್ನಪ್ಪಿದ್ದಾನೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99