
ಪ್ರಿಯಕರನ ಸಾವು : ಮನನೊಂದು 18 ವರ್ಷದ ಪ್ರಿಯತಮೆ ಆತ್ಮಹತ್ಯೆ..
Friday, December 17, 2021
ಕಲ್ಬುರ್ಗಿ : ಕಲ್ಬುರ್ಗಿ ನಗರದ ಯುವತಿಯೊಬ್ಬಳು ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲಬುರಗಿ ಕ್ವಾಟರ್ಸ್‍ನಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಶೃತಿ (18) ಆತ್ಮಹತ್ಯೆ ಮಾಡಿಕೊಂಡವರು.
ಶೃತಿ ಯ ಪ್ರಿಯಕರ ಒಂದು ತಿಂಗಳ ಹಿಂದೆಯಷ್ಟೇ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದನು. ಶೃತಿ ಪ್ರಿಯತಮನ ಸಾವಿನಿಂದ ಮನನೊಂದು ಕೆಲವು ದಿನಗಳ ಹಿಂದೆ ಆಹಾರವನ್ನು ತ್ಯಜಿಸಿದ್ದಳು.
ಯುವತಿಯ ಹಳೆ ನೆನಪನ್ನು ಮರೆಸುವ ಸಲುವಾಗಿ ಮನೆಯವರು ಸಂಬಂಧಿಕ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಯಿಸಿದ್ದರು.ಇದರಿಂದ ಕೋಪಗೊಂಡ ಯುವತಿ ಮನೆಯಲ್ಲಿ ಯಾರು ಇಲ್ಲದಿರುವ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.