
ಮಂಗಳೂರಿನಲ್ಲಿ ಪತ್ತೆಯಾಯಿತು ಓಮಿಕ್ರಾನ್- 5 ವಿದ್ಯಾರ್ಥಿಗಳಲ್ಲಿ ವೈರಸ್
Saturday, December 18, 2021
ಮಂಗಳೂರು; ಭೀತಿ ಹುಟ್ಟಿಸಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಐದು ಮಂದಿಯಲ್ಲಿ ಕೊರೊನಾ ಓಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿದೆ. ಮಂಗಳೂರಿನ ಕುರ್ನಾಡುವಿನ ಜೆ ಎನ್ ವಿ ಶಾಲೆಯ 16 ಮಕ್ಕಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು.ಡಿಸೆಂಬರ್ 10 ರಂದು ಇವರಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು ಇವರ ಮಾದರಿಯನ್ನು ಜೆನೊಮಿಕ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಜೆನೊಮಿಕ್ ರಿಪೋರ್ಟ್ ನ ವರದಿ ಇಂದು ಬಂದಿದ್ದು ಇದರಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ಇರುವುದು ಪತ್ತೆಯಾಗಿದೆ.
ಇನ್ನೂ ಡಿಸೆಂಬರ್ 9 ರಂದು ಶ್ರೀನಿವಾಸ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಪತ್ತೆಯಾಗಿತ್ತು. ಇವರ ಮಾದರಿಯನ್ನು ಡಿಸೆಂಬರ್ 10 ರಂದು ಜೆನೊಮಿಕ್ ರಿಪೋರ್ಟ್ ಗೆ ಕಳುಹಿಸಿದ್ದು ಇದರಲ್ಲಿ ಓರ್ವ ವಿದ್ಯಾರ್ಥಿನಿ ಗೆ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಇವರೆಲ್ಲರೂ ಇದೀಗ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.