-->

UAE ಯಲ್ಲಿ ಇನ್ನು ವಾರದಲ್ಲಿ ನಾಲ್ಕೂವರೆ ದಿನ ಕೆಲಸ!

UAE ಯಲ್ಲಿ ಇನ್ನು ವಾರದಲ್ಲಿ ನಾಲ್ಕೂವರೆ ದಿನ ಕೆಲಸ!


ದುಬಾಯಿ : ಕೆಲಸದ ಒತ್ತಡ ಕಡಿಮೆ ಮಾಡಲು ಜನರಿಗೆ ಹೆಚ್ಚಿನ ಬಿಡುವು ನೀಡಬೇಕು ಎಂಬ ನೆಲೆಯಲ್ಲಿ ವಾರದಲ್ಲಿ ಸರಕಾರಿ ನೌಕರರು ನಾಲ್ಕೂವರೆ ದಿನ ಮಾತ್ರ ಕೆಲಸ ಮಾಡಬೇಕು ಎಂದು ಯುಎಇ ಸರಕಾರ ಆದೇಶ ಹೊರಡಿಸಿದೆ . 

ಈ  ಮೂಲಕ ವಿಶ್ವದಲ್ಲಿವಾರದಲ್ಲಿ ಅತಿ ಕಡಿಮೆ ಅವಧಿಯ ಕೆಲಸ ಇರುವ ದೇಶ UAE ಎನಿಸಿದೆ . ನೂತನ ನಿಯಮವು 2022 ರ ಜನವರಿ 1 ರಿಂದಲೇ ಜಾರಿಯಾಗಲಿದೆ . UAE ಯಲ್ಲಿ ಇದುವರೆಗೆ ನೌಕರರು ವಾರದಲ್ಲಿ 5 ದಿನ ಕೆಲಸವಿದ್ದು ಈಗ  ನಾಲ್ಕೂವರೆ ದಿನಕ್ಕೆ ಇಳಿಸಲಾಗಿದೆ . 
ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7.30 ರಿಂದ ಮಧ್ಯಾಹ್ನ 3.30 ರವರೆಗೆ ಹಾಗೂ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಕೆಲಸ ಮಾಡಬೇಕು  ಎಂದು ಆದೇಶಿಸಲಾಗಿದೆ . 

ಶನಿವಾರ ಹಾಗೂ ರವಿವಾರ ಸಂಪೂರ್ಣವಾಗಿ ರಜೆ ಇರಲಿದೆ . ಶುಕ್ರವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ ಕೆಲಸ ಮುಗಿಯುವುದರಿಂದ ಪ್ರಾರ್ಥನೆ ಸಲ್ಲಿಸಲು ಸಹ ಅನುಕೂಲವಾಗಲಿದೆ . ವಾರಾಂತ್ಯದಲ್ಲಿ ಜನರಿಗೆ ಹೆಚ್ಚಿನ ಬಿಡುವು ಸಿಗುವುದರಿಂದ ಕೆಲಸದಲ್ಲಿ ದಕ್ಷತೆ ಬರುವ ಜತೆಗೆ ಔದ್ಯೋಗಿಕ ಜೀವನದ ಸಮತೋಲನವೂ ಸಾಧ್ಯವಾಗಲಿದೆ ಎಂದು UAE ಸರಕಾರ ತಿಳಿಸಿದೆ . ಸರಕಾರಿ ಕಚೇರಿಗಳು , ಶಾಲೆ , ಕಾಲೇಜುಗಳಲ್ಲಿ ನೂತನ ನಿಯಮ ಅನ್ವಯವಾಗಲಿದ್ದು  ಖಾಸಗಿ ಸಂಸ್ಥೆಗಳು ಸಹ ಇದೇ ನಿಯಮ ಪಾಲಿಸಲಿವೆ ಎಂದು ತಿಳಿದುಬಂದಿದೆ .  ಹೊಸ ಆದೇಶದ ಪ್ರಕಾರ ಶುಕ್ರವಾರ  ಮನೆಯಿಂದಲೇ ಕೆಲಸ ( ವರ್ಕ್ ಫ್ರಂ ಹೋಮ್ ) ಮಾಡುವ ಆಯ್ಕೆಯು ಇದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99