-->

17 ವಿದ್ಯಾರ್ಥಿನಿಯರ ಮೇಲೆ ಪ್ರಿನ್ಸಿಪಾಲರಿಂದ ಲೈಂಗಿಕ‌ ದೌರ್ಜನ್ಯ

17 ವಿದ್ಯಾರ್ಥಿನಿಯರ ಮೇಲೆ ಪ್ರಿನ್ಸಿಪಾಲರಿಂದ ಲೈಂಗಿಕ‌ ದೌರ್ಜನ್ಯ


ಲಖನೌ : ಪರೀಕ್ಷೆಗಳ ತಯಾರಿಗಾಗಿ ಶಾಲೆಯಲ್ಲಿ ರಾತ್ರಿ ಕಳೆಯುವಂತೆ ಸೂಚಿಸಿ ಹೈಸ್ಕೂಲ್ ನ  ಪ್ರಿನ್ಸಿಪಾಲರು ಹಾಗೂ ಇತರ ಸಿಬ್ಬಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮುಜಫರ್‌ನಗರದ ಹೈಸ್ಕೂಲ್ ನ 10 ನೇ ತರಗತಿಯ 17 ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ . 

ಈ ಸಂಬಂಧ ಮುಜಫರ್‌ನಗರ ಪೊಲೀಸರು FIR ದಾಖಲಿಸಿ ಕೊಂಡಿದ್ದಾರೆ . ನ .18 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ . ಶಾಲೆ ಇರುವ ಪ್ರದೇಶದಲ್ಲಿನ ಮತ್ತೊಂದು ಶಾಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಿಗದಿ ಯಾಗಿದ್ದವು . 

ಪ್ರಾಂಶುಪಾಲ ಪ್ರಮೋದ್ ಹಾಗೂ ಇತರ ಶಾಲಾ ಸಿಬ್ಬಂದಿಯು ವಿದ್ಯಾರ್ಥಿನಿಯರಿಗೆ ಕೊಠಡಿಗಳಲ್ಲೇ ಉಳಿದುಕೊಂಡು ಚೆನ್ನಾಗಿ ಅಭ್ಯಾಸ ಮಾಡಲು ಸೂಚಿಸಿದ್ದರು . ಇದನ್ನು ನಂಬಿಕೊಂಡು ರಾತ್ರಿ ತಂಗಿದ್ದಾಗ ತಮಗೆ ಮಾದಕವಸ್ತು ಅಥವಾ ನಿದ್ರೆ ಮಾತ್ರೆ ನೀಡಿ ಮೂರ್ಛೆ ಹೋಗುವಂತೆ ಮಾಡಲಾಯಿತು . ಬಳಿಕ ಲೈಂಗಿಕ ಕಿರುಕುಳ ನೀಡಲಾಯಿತು  ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ತಿಳಿಸಿದ್ದಾರೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99