ಯಾಹೂ 2021 ರಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳಾ ನಟಿಯರಲ್ಲಿ ಸಮಂತಾ ಗೆ ಎಷ್ಟನೇ ಸ್ಥಾನ ಗೊತ್ತಾ..??
Tuesday, December 7, 2021
ಹೈದರಾಬಾದ್: 2021ರ ಹೆಚ್ಚು ಹುಡುಕಲ್ಪಟ್ಟ ಚಲನಚಿತ್ರ ನಟಿಯರಲ್ಲಿ ನಟಿ ಸಮಂತಾ, ಒಬ್ಬರಾಗಿದ್ದಾರೆ.
ಕೆಲವರು ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಅವರ ವಿಚ್ಛೇದನದ ಬಳಿಕ ಸಮಂತಾರನ್ನು ಟ್ರೋಲ್ ಮಾಡಿದರೆ, ಇತರರು ಅವರನ್ನು ಶ್ಲಾಘಿಸಿದ್ದಾರೆ. ಹೀಗಾಗಿ, ಯಾಹೂ ಇಂಡಿಯಾದ ವರ್ಷದ ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳಾ ನಟಿಯರ ಪಟ್ಟಿಯಲ್ಲಿ, ಸಮಂತಾಗೆ 10ನೇ ಸ್ಥಾನ ಲಭಿಸಿದೆ. ಇನ್ನು, ಈ ಪಟ್ಟಿಯಲ್ಲಿ ಅಗ್ರಸ್ಥಾನ ದಕ್ಕಿರುವುದು ನಟಿ ಕರೀನಾ ಕಪೂರ್ ಖಾನ್ಗೆ. ಆದರ ನಂತರ ನಟಿಯರಾದ ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.