
ರೇಷ್ಮೆ ಸೀರೆಯುಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ ..!ಏನಿದು ಪ್ರಸಂಗ...?
Tuesday, December 7, 2021
ಕೊಲ್ಕತಾ: ವ್ಯರ್ಥವಾಗುತ್ತಿದ್ದ ಮದುವೆಯ ಊಟವನ್ನು ಮಹಿಳೆಯೊಬ್ಬರು, ಮಧ್ಯರಾತ್ರಿ ತೆಗೆದುಕೊಂಡು ಹೋಗಿ ರೈಲ್ವೇ ಪ್ಲಾಟ್ಫಾರಂನಲ್ಲಿ ಬಡವರಿಗೆ ಹಂಚಿರುವ ಪ್ರಸಂಗ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.ವೆಡ್ಡಿಂಗ್ ಫೋಟೋಗ್ರಾಫರ್ ನೀಲಾಂಜನ್ ಮೊಂಡಲ್ ಈ ಮಹಿಳೆಯ ಚಿತ್ರವನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ.
ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟ ಮಹಿಳೆಯೊಬ್ಬರು ಕೊಲ್ಕತಾ ಸಬ್ಅರ್ಬನ್ ರೈಲ್ವೇ ಸ್ಟೇಷನ್ನ ರಾಣಾಘಟ್ ಜಂಕ್ಷನ್ನಲ್ಲಿ ಡಿ.4 ರ ಮಧ್ಯರಾತ್ರಿ 1 ಗಂಟೆಗೆ ಪಾಪಿಯ ಕರ್ ಎಂಬ ಮಹಿಳೆ ಹಸಿದವರ ಹೊಟ್ಟೆ ತಣ್ಣಗಾಗಿಸಿದ್ದಾರೆ. ತಮ್ಮ ಸೋದರನ ಮದುವೆಯ ಸಮಾರಂಭದಲ್ಲಿ ಅತಿಥಿಗಳ ಊಟವೆಲ್ಲಾ ಮುಗಿದ ನಂತರ ಉಳಿದಿದ್ದ ಭಾರೀ ಪ್ರಮಾಣದ ಊಟವನ್ನು ಪೇಪರ್ ಪ್ಲೇಟ್ಗಳ ಮೇಲೆ ಖುದ್ದು ಬಡಿಸಿಕೊಟ್ಟಿದ್ದಾರೆ. ಈ ಮಾನವೀಯ ಕೆಲಸದ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.