
ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿದ್ದರು- ಯು ಟಿ ಖಾದರ್
Tuesday, December 7, 2021
ಮಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹಿಂದೊಮ್ಮೆ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಳಿನ್ ಕುಮಾರ್ ಕಟೀಲ್ ನನ್ನನ್ನು ಮತ್ತು ರಮಾನಾಥ ರೈ ಅವರನ್ನು ಬಿಟ್ಟು ಉಳಿದ ಕಾಂಗ್ರೆಸ್ ನವರನ್ನು ಬಿಜೆಪಿಗೆ ಸೇರಿಸುವ ಬಗ್ಗೆ ಮಾತನಾಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಹಳೆಯದು ನೆನಪಾಗುತ್ತಿದೆ. ಅವರು ಹಿಂದೊಮ್ಮೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರು ವಿನಯಕುಮಾರ್ ಸೊರಕೆ ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ಪರ ದುಡಿದಿದ್ದಾರೆ. ಆಗ ಕಾಂಗ್ರೆಸ್ ಪಕ್ಷದ ಒಳ್ಳೆಯತನ ಗೊತ್ತಾಗಿದೆ.ಅದಕ್ಕಾಗಿ ಕಾಂಗ್ರೆಸ್ ನಲ್ಲಿರುವವರನ್ನು ಬಿಜೆಪಿ ಗೆ ಕರೆಸಿಕೊಳ್ಳುವ ಮಾತಾಡುತ್ತಿದ್ದಾರೆ. ಅದೆಲ್ಲ ಕಷ್ಟಸಾಧ್ಯ. ಅವರು ಸಂತೋಷವಾಗಿರಬೇಕಿದ್ದರೆ ಅವರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಆಹ್ವಾನಿಸಿದರು.