ತಾಯಿಯ ಅತ್ಯಾಚಾರಕ್ಕೆ ಯತ್ನಿಸಿದಾತನ ಕೊಲೆಗೈದು ಪೊಲೀಸರಿಗೆ ಶರಣಾದ ಬಾಲಕಿಯರು
Wednesday, December 29, 2021
ವಯನಾಡ್ ( ಕೇರಳ) : ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನನ್ನು ಕೊಲೆಗೈದ ಬಾಲಕಿಯರಿಬ್ಬರು ತಾಯಿಯ ಜತೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ .
ದೂರದ ಸಂಬಂಧಿ ಯೂ ಆಗಿರುವ 70 ವರ್ಷದ ವೃದ್ಧ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ . ಅದನ್ನು ತಡೆಯಲು 15 ಮತ್ತು 16 ವರ್ಷದ ಬಾಲಕಿಯರು ನಡೆಸಿದ ಹಲ್ಲೆಯ ರಭಸಕ್ಕೆ ವೃದ್ಧ ಸಾವನ್ನಪ್ಪಿದ್ದಾನೆ . ಬಳಿಕ ಆತನ ಶವವನ್ನು ಸಮೀಪದ ಬಾವಿಗೆ ಬಿಸಾಡಿದ ಇವರು ಸಮೀಪದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ .
ವಯನಾಡ್ ಜಿಲ್ಲೆಯ ಆಯಿರಮ್‌ಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯು ಮಲಪ್ಪುರಂ ಜಿಲ್ಲೆಯವನಾಗಿದ್ದು , ಈತನಿಗೆ ಇಬ್ಬರು ಪತ್ನಿಯರು ಮತ್ತು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ .