
Mangalore- ಕೊರಗಜ್ಜನ ಗುಡಿಗೆ ನಿರೋಧ್ ಇಟ್ಟವನ ಚಹರೆ ಸಿಸಿಟಿವಿಯಲ್ಲಿ ಸೆರೆ- video
ಮಂಗಳೂರು; ಮಂಗಳೂರಿನ ಮಾರ್ನಮಿಕಟ್ಟೆಯ ಕೊರಗಜ್ಜಬ ಗುಡಿಯಲ್ಲಿ ನಿರೋಧ್ ಇಟ್ಟವನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜನ ಗುಡಿಯ ಮೂರ್ತಿಯ ಮೇಲೆ ಬಳಸಿದ ನಿರೋಧ್ ಇಟ್ಟ ಕೃತ್ಯ ನಿನ್ನೆ ಬೆಳಕಿಗೆ ಬಂದಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಘಟನೆಯ ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಯುವಕನೊಬ್ಬ ದುಷ್ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಡಿಸೆಂಬರ್ 27 ರಂದು ರಾತ್ರಿ 11. 40 ಕ್ಕೆ ಯುವಕನೊಬ್ಬ ಗುಡಿಗೆ ಬಂದು ಕಾಂಡೋಮ್ ಇಡುವುದು ದಾಖಲಾಗಿದೆ. ಇದರ ಆಧಾರದಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.