-->

ಮಂಗಳೂರಿನ ಕೊರಗಜ್ಜ ಗುಡಿಗೆ ನಿರೋಧ್ ಹಾಕಿದವನು ಇವನೆ... ಈತ ನಿರೋಧ್ ಹಾಕಿದ ಪಟ್ಟಿಯಲ್ಲಿದೆ ದರ್ಗಾ , ಗುರುದ್ವಾರ!

ಮಂಗಳೂರಿನ ಕೊರಗಜ್ಜ ಗುಡಿಗೆ ನಿರೋಧ್ ಹಾಕಿದವನು ಇವನೆ... ಈತ ನಿರೋಧ್ ಹಾಕಿದ ಪಟ್ಟಿಯಲ್ಲಿದೆ ದರ್ಗಾ , ಗುರುದ್ವಾರ!




ಮಂಗಳೂರು; ಕಳೆದ ಒಂದು ವರ್ಷದಿಂದ ಮಂಗಳೂರಿನ ವಿವಿಧೆಡೆ ಕೊರಗಜ್ಜನ ಗುಡಿ ಸೇರಿದಂತೆ ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಿಗೆ ನಿರೋಧ್ ಹಾಕುತ್ತಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.




ಮಂಗಳೂರಿನ ಕೋಟೆಕಾರ್ ನ ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ ಆರೋಪಿ.  ಕ್ರಿಶ್ಚಿಯನ್ ಧರ್ಮದ ಪರವಾಗಿ ಬರಹಗಳನ್ನು ಬರೆದು ಇತರ ಧರ್ಮಗಳ ವಿರುದ್ದವಾಗಿ ಈತ ಈ ಕೃತ್ಯ ಎಸಗಿದ್ದಾನೆ. ಈತ  ಹೇಳುವ ಪ್ರಕಾರ ದೇವಲೋಕದಿಂದ ಸಾವಿರಾರು ದೇವದೂತರನ್ನು ಅವಮಾನಿಸಲೆಂದೆ ಹೊರಹಾಕಲಾಗಿದೆ. ಈ ದುರಾತ್ಮಗಳಿಗೆ ಅವಮಾನ ಮಾಡಲು ಈ ರೀತಿ ಮಾಡಿದ್ದೇನೆ.ಇದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ ಎಂದಿದ್ದಾನೆ.

ದೇವದಾಸ್ ದೇಸಾಯಿ ನೀಡಿದ ಹೇಳಿಕೆ

ನಾನು ಮೂಲತ: ಹುಬ್ಬಳ್ಳಿಯ ಉಣ್ಕಲ್ ಎಂಬ ಊರಿನಲ್ಲಿ ಜನಿಸಿದ್ದು, ನನ್ನ ತಂದೆ ತಾಯಿಯವರಿಗೆ ನಾವು ನಾಲ್ಕು ಜನ  ಮಕ್ಕಳಿದ್ದು, ಮೊದಲನೇಯವನು ಅಣ್ಣ ಸುರೇಂದ್ರ ಕುಮಾರ್, ಎರಡನೆಯವನು ಅಣ್ಣ ಜ್ಯೋತಿಕುಮಾರ್, ಮೂರನೇಯವಳು ಅಕ್ಕ ಪದ್ಮಾವತಿ, ನಾನು ಕಿರಿಯ ಮಗನಾಗಿರುತ್ತೇನೆ. ನಾನು ಹುಬ್ಬಳ್ಳಿಯ ಬಾಸೆಲ್ ಮಿಷನ್ ಹೈಯರ್ ಸೆಕಂಡರಿ ಸ್ಕೂಲ್ ನಲ್ಲಿ 1977 ನೇ ಇಸವಿಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡಿರುತ್ತೇನೆ. ನನ್ನ ತಾಯಿ ಸುಲೋಚನಾ ಬಾಯಿಯವರು ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು, 1983 ನೇ ಇಸವಿಯಲ್ಲಿ ತೀರಿಕೊಂಡಿರುತ್ತಾರೆ.  ನನ್ನ ತಂದೆಯವರಾದ ಜಾನ್ ದೇಸಾಯಿಯವರು 1983ನೇ ಇಸವಿಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ನಿವ್ರತ್ತಿಯಾಗಿದ್ದು, 1997 ನೇ ಇಸವಿಯಲ್ಲಿ ತೀರಿಕೊಂಡಿರುತ್ತಾರೆ.
ನಂತರ ನಾನು 1985ನೇ ಇಸವಿಯಲ್ಲಿ ಧಾರವಾಡ ಸಾರಿಗೆ ಕಛೇರಿಯಲ್ಲಿ ತ್ರಿಚಕ್ರ ವಾಹನದ ಚಾಲನಾ ಪರವಾನಿಗೆಯನ್ನು ಪಡೆದುಕೊಂಡು 1991 ನೇ ಇಸವಿವರೆಗೆ ಹುಬ್ಬಳ್ಳಿ ನಗರದಲ್ಲಿ ಅಟೋರಿಕ್ಷಾ ಚಲಾಯಿಸಿ ಕೊಂಡಿದ್ದೆನು. 1991 ನೇ ಇಸವಿಯಲ್ಲಿ ನನ್ನ ಅಣ್ಣ ಜ್ಯೋತಿಕುಮಾರ್ ದೇಸಾಯಿಯವರ ಹೆಂಡತಿ ಸುಮಂಗಳಾ ರವರ ಪರಿಚಯದ ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ಎಂಬಲ್ಲಿಯ ಜೋಸೆಫ್ ರವರ ಪುತ್ರಿ ವಸಂತ ಕುಮಾರಿಯ ಜೊತೆಗೆ ನನಗೆ ಮದುವೆಯಾಗಿದ್ದು, 1993 ನೇ ಇಸವಿಯಲ್ಲಿ ನಮಗೆ ಹೆಣ್ಣು ಮಗುವಾಗಿದ್ದು ಅವಳ ಹೆಸರು ಪದ್ಮಾವತಿ ಎಂಬುದಾಗಿರುತ್ತದೆ.

 

ನಂತರ ನಾನು 1997 ನೇ ಇಸವಿಯಲ್ಲಿ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದು, ಮಂಗಳೂರಿನ ಬಂದರಿನ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ್ ಕಛೇರಿಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡೆನು. ಆ ಸಮಯ ಸುರತ್ಕಲ್ ಸೂರಿಂಜೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೆನು. ನನ್ನ ಹೆಂಡತಿ ಹಾಗೂ ಮಗಳು ಹುಬ್ಬಳ್ಳಿಯ ನಮ್ಮ ಮನೆಯಲ್ಲಿದ್ದವರು ಅತ್ತಿಗೆಯ ಜೊತೆಗೆ ಮನಸ್ತಾಪ ಮಾಡಿಕೊಂಡು ಅವಳ ಸ್ವಂತ ಊರಾದ ಚಿಕ್ಕಮಗಳೂರಿಗೆ ಹೋದವರು ನಂತರ ನನ್ನನ್ನೂ ದೂರಮಾಡಿ ಅಲ್ಲಿಯೇ ನೆಲೆಸಿರುತ್ತಾರೆ. 

 

1999ನೇ ಇಸವಿಯಲ್ಲಿ ವಿ.ಆರ್.ಎಲ್. ಕಛೇರಿಯ ಕೆಲಸವನ್ನು ಬಿಟ್ಟು, ನನ್ನ ಸ್ವಂತ ಊರಾದ ಹುಬ್ಬಳ್ಳಿಗೆ ಹೋಗಿದ್ದು, ಅಲ್ಲಿಂದ ಕೊಡಗು ಜಿಲ್ಲೆಯ ವಿರಾಜಪೇಟೆಯ ಮತ್ತೂರು ಎಂಬಲ್ಲಿ ಶ್ರೀನಿವಾಸ ಕಾಫಿ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸಕ್ಕೆ ಸೇರಿದ್ದು, 2000ನೇ ಇಸವಿಯಲ್ಲಿ ಅಲ್ಲಿಂದ ಕೆಲಸ ಬಿಟ್ಟು ಮಂಗಳೂರಿಗೆ ಬಂದು ಬಾಡಿಗೆ ರಿಕ್ಷಾ ಚಲಾಯಿಸಿಕೊಂಡಿದ್ದೆನು. ಈ ಸಮಯದಲ್ಲಿ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೊನಿಯಲ್ಲಿ ಪೊಲೀಸ್ ಕೃಷ್ಣಪ್ಪ ಎಂಬವರ ಮನೆಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದೆನು. 2003 ನೇ ಇಸವಿಯಲ್ಲಿ ಮಂಗಳೂರಿನ ಬೆಂದೂರ್ ವೆಲ್ ನ ಕೊಲಾಸೋ ಆಸ್ಪತ್ರೆಯ ಮಾಲಕರಾದ ಮಥಾಯಿಸ್ ಪ್ರಭು ರವರ ಕಾರಿನ ಚಾಲಕನಾಗಿ ಸುಮಾರು 6 ತಿಂಗಳುಗಳ ಸಮಯ ಕೆಲಸ ಮಾಡಿಕೊಂಡಿದ್ದೆನು. 

 

ನಂತರ 2006 ನೇ ಇಸವಿಯಲ್ಲಿ ತಲಪಾಡಿ ಕೆ.ಸಿ. ರೋಡ್ ಬಳಿ ಅಂತೋನಿ ರಾಜ್ ಎಂಬವರ ಮನೆಯನ್ನು ಖರೀದಿ ಮಾಡಿದ್ದು, ಪ್ರಸ್ತುತ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸಮಾಡಿಕೊಂಡಿರುವುದಾಗಿದೆ. ಸರಿಯಾದ ಕೆಲಸವಿಲ್ಲದೆ ಗುಜಿರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವುದಾಗಿದೆ. 

ನಾನು ಈ ಕೆಳಕಂಡ ಸ್ಥಳಗಳಲ್ಲಿನ ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ( ಕೂಳೂರು) ಮುಂತಾದ ಕಡೆಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ,ಏಸುವಿನ ಕುರಿತ ಲೇಖನ ಹಾಕಿದ್ದಾಗಿದೆ. 

1. ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ
2. ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ
3. ಕೊಂಡಾಣ ದೈವಸ್ಥಾನ 
4. ಮಂಗಳಾದೇವಿ ದೇವಸ್ಥಾನ 
5. ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ
6. ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ 
7. ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ
8. ಕಲ್ಲಾಫು ನಾಗನ ಕಟ್ಟೆ 
9. ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ 
10. ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ
11. ಕುತ್ತಾರು ಕೊರಗಜ್ಜನ ಕಟ್ಟೆ
12. ಕುಡುಪು ದೈವಸ್ಥಾನ 
13. ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ 
14. ನಂದಿಗುಡ್ಡೆಯ ಕೊರಗಜ್ಜನ ಗುಡಿ
15. ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ
16. ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು
17. ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್
18. ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99