ಮಂಗಳೂರಿನಲ್ಲಿ ಮತ್ತೆ ಕೊರಗಜ್ಜನ ಗುಡಿಯಲ್ಲಿ ಉಪಯೋಗಿಸಿ ನಿರೋಧ್ ಹಾಕಿದ ದುಷ್ಕರ್ಮಿಗಳು
Tuesday, December 28, 2021
ಮಂಗಳೂರು: ಮಂಗಳೂರಿನಲ್ಲಿ ಮತ್ತೊಮ್ಮೆ ಕೊರಗಜ್ಜನ ಗುಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ.
ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜನಗುಡಿಯಲ್ಲಿ ಕಾಂಡೋಮ್ ಹಾಕಿರುವುದು ಇಂದು ಬೆಳಕಿಗೆ ಬಂದಿದೆ. ಕೊರಗಜ್ಜನ ಗುಡಿಯ ಕಲ್ಲಿನ ಮೂರ್ತಿ ಮೇಲೆ ದುಷ್ಕರ್ಮಿಗಳು ಉಪಯೋಗಿಸಿದ ಕಾಂಡೋಮ್ ಹಾಕಿದ್ದಾರೆ. ಈ ವಿಚಾರ ತಿಳಿದ ಭಕ್ತರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷದ ಜನವರಿ ಫೆಬ್ರವರಿ ತಿಂಗಳಿನಲ್ಲಿಯೂ ಇಂತಹದೆ ದುಷ್ಕೃತ್ಯವನ್ನು ಮಂಗಳೂರಿನಲ್ಲಿ ನಡೆಸಲಾಗಿತ್ತು.