![ಬಾಲಕಿಯ ಮೇಲೆ ಬಾಲಕರು ಸೇರಿದಂತೆ 9 ಮಂದಿಯಿಂದ ಅತ್ಯಾಚಾರ ಬಾಲಕಿಯ ಮೇಲೆ ಬಾಲಕರು ಸೇರಿದಂತೆ 9 ಮಂದಿಯಿಂದ ಅತ್ಯಾಚಾರ](https://blogger.googleusercontent.com/img/b/R29vZ2xl/AVvXsEgHRql_I69gWn31vcmCG-WGiuP4m3slE8Rw7y__n6WiY1BAZ9d3g0-Pna4KOB10Evw4w4_3_N5QmYMyAN_nzjt7AOfNuf1q5K335AJn6YK6EVjQ38GOs28Tst5drDwgJeyYBnNbkZskEVs/s1600/1640603294338466-0.png)
ಬಾಲಕಿಯ ಮೇಲೆ ಬಾಲಕರು ಸೇರಿದಂತೆ 9 ಮಂದಿಯಿಂದ ಅತ್ಯಾಚಾರ
Monday, December 27, 2021
ಗಾಂಧಿನಗರ : ಗುಜರಾತ್‌ನ ಡಾಂಗ್ ಜಿಲ್ಲೆಯಲ್ಲಿ ಬಾಲಕರಿಂದಲೇ ಸಾಮೂಹಿಕ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು 3 ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ
2 ತಿಂಗಳ ಹಿಂದೆಯೇ ನಡೆದಿರುವ ಅತ್ಯಾಚಾರ ಘಟನೆ ತಡವಾಗಿ ಬೆಳಕಿಗೆ ಬಂದಿದೆ . ಕೃತ್ಯದಲ್ಲಿ ಭಾಗಿಯಾದ ಪುಂಡನೊಬ್ಬ ಅತ್ಯಾಚಾರದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು , ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ .
ಅದನ್ನು ನೋಡಿದ ಬಾಲಕಿಯ ಮನೆಯವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದರು . ಬಾಲಕಿ ಮೇಲೆ ಮೊದಲು ಬಾಲಕನೊಬ್ಬ ಅತ್ಯಾಚಾರ ಎಸಗಿದ್ದ . ನೆರೆ ಊರಿನಲ್ಲಿ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬಾಲಕಿ ಜತೆಗೆ ವಾಪಸಾಗುವ ದಾರಿಯಲ್ಲಿ ಈ ಕೃತ್ಯವನ್ನು ಎಸಗಿದ್ದ
ನಂತರ ಆತ ಸ್ನೇಹಿತರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದ . ಇದರಿಂದ ಜಾಗೃತರಾದ ಆತನ ಎಂಟು ಮಂದಿ ಸ್ನೇಹಿತರು ದಾರಿಯಲ್ಲಿ ಕಾಯ್ದು ಕುಳಿತು , ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ . ಕೃತ್ಯ ಎಸಗಿದ ಒಟ್ಟು 9 ಜನರಲ್ಲಿ ಮೂವರು ಬಾಲಕರು ಹಾಗೂ ಇತರ ಆರು ಜನ 20 ವರ್ಷ ದಾಟಿದವರಾಗಿದ್ದಾರೆ ಎಂದು ಪೊಲೀಸ್ ಅಧಿ ಕಾರಿ ಎನ್.ಎಚ್.ಶ್ರೀವತ್ಸತಿಳಿಸಿದ್ದಾರೆ .
ಬಳಿಕ ಆ ದಾರಿಯಲ್ಲಿ ಊರಿನ ಜನ ಬರುತ್ತಿದ್ದುದ್ದನ್ನು ಕಂಡು ಬಾಲಕಿಯನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದರು . ಹೋಗುವ ಮುನ್ನ , ಘಟನೆ ಕುರಿತು ಯಾರ ಬಳಿಯೂ ಬಾಯಿ ಬಿಡಬಾರದು ಎಂದು ಬಾಲಕಿಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ .