
ಯುವತಿಯ ಬೆತ್ತಲೆ ಸ್ನಾನದ ವಿಡಿಯೊ ವೈರಲ್- ಆರೋಪಿ ರಾಜಕೀಯ ಮುಖಂಡ
Sunday, December 19, 2021
ಹೊನ್ನಾವರ: ಉಮೇಶ್ ಸಾರಂಗ ಎಂಬಾತ ನಾನು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಉಮೇಶ್ ಸಾರಂಗ ಆಟೊ ಚಾಲಕನಾಗಿದ್ದು , ರಾಜಕೀಯ ಪಕ್ಷವೊಂದರ ನಗರ ಘಟಕದ ಅಧ್ಯಕ್ಷನಾಗಿದ್ದಾನೆ . ಆತ ನಮ್ಮ ಕೇರಿಯವನಾಗಿದ್ದು ಒಮ್ಮೆ ಆಟೊ ಹತ್ತಿದಾಗ ಮೊಬೈಲ್ ನಂಬರ್ ಪಡೆದು ಸಲುಗೆಯಿಂದ ನಡೆದುಕೊಳ್ಳುತ್ತಿದ್ದ . ಅದನ್ನೇ ಬಳಸಿಕೊಂಡು ಸ್ನಾನ ಮಾಡುತ್ತಿರುವ ವಿಡಿಯೊವನ್ನು ಕೊಡುವಂತೆ ಒತ್ತಾಯಿಸುತ್ತಿದ್ದನು . ಮೊದಮೊದಲು ಈತನ ಬೇಡಿಕೆಯನ್ನು ತಿರಸ್ಕರಿಸಿದ್ದೆ . ಸ್ನೇಹವನ್ನು ಗಂಡನಿಗೆ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದಾಗ ಸ್ನಾನ ಮಾಡುತ್ತಿರುವ ವಿಡಿಯೊ ಮಾಡಿ ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿದ್ದೆ . ಈಗ ಅದನ್ನು ಆತ ವೈರಲ್ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾರೆ .