ಮಂಗಳೂರಿನಲ್ಲಿ Any Desk App ಮೂಲಕ ಮತ್ತೊಂದು ವಂಚನೆ- ಸಿಮ್ ಬದಲಾವಣೆ ಮಾಡಲು ಹೋಗಿ 29 ಸಾವಿರ ಕಳೆದುಕೊಂಡ!
Friday, December 3, 2021
ಮಂಗಳೂರು; Any desk app ಮೂಲಕ ವಂಚನೆ ಪ್ರಕರಣ ಹೆಚ್ಚುತ್ತಿದ್ದು ಸಿಮ್ ಬದಲಾವಣೆ ಯ ನೆಪದಲ್ಲಿ ಬಂಟ್ವಾಳದ ವ್ಯಕ್ತಿ ಯೊಬ್ಬರಿಗೆ any desk app ಮೂಲಕ 29 ಸಾವಿರ ವಂಚನೆ ಮಾಡಲಾಗಿದೆ.
ಘಟನೆ ಏನು?
ಬಂಟ್ವಾಳ ತಾಲೂಕಿನ ಜಿ ಪ್ರವೀಣ್ ಜೋಶಿ ಎಂಬವರು 10 ವರ್ಷದಿಂದ ಏರ್‌ಟೆಲ್ ಸಿಮ್ ಉಪಯೋಗಿಸುತ್ತಿದ್ದು , ದಿನಾಂಕ 30-11-2021 ರಂದು 7063004906 ನೇದರಿಂದ ಅವರ Lower AIRTEL SIM SLM DOCCUMENT PENDING SIM DEACTIVATE ಎಂಬ ಮೇಸೇಜ್ ಬಂದಿತ್ತು. ಆದರೆ ಇವರು ಅದಕ್ಕೆ ಯಾವುದೇ ಉತ್ತರ ನೀಡಿರುವುದಿಲ್ಲ .
ನಂತರ ಮರುದಿನ ದಿನಾಂಕ 01-12-2021 ರಂದು ಅದೇ ಮೆಸೇಜ್ ಬಂದಿತ್ತು. ಪ್ರವೀಣ್ ಜೋಷಿ ಅವರು ತಮ್ಮ SIM ಹಾಳಾಗಿ ಅದೇ ಸಂಖ್ಯೆಯ ಬದಲಿ ಸಿಮ್ ಗಾಗಿ ಪ್ರಯತ್ನಿಸುತ್ತಿದ್ದ ಸಂದರ್ಭ ಈ ಮೇಸೆಜ್ ನಿಂದ ಗೊಂದಲಕ್ಕೊಳಗಾಗಿ ಸಂದೇಶದಲ್ಲಿದ್ದ ನಂಬರ್ ಕರೆ ಮಾಡಿ ವಿಚಾರಿಸಿದ್ದಾರೆ.
ಆಗ ಕರೆ ಸ್ವೀಕರಿಸಿದ ವ್ಯಕ್ತಿಯು duplicate Sim ನ್ನು ಸರಿಪಡಿಸಿ ಕೊಡುವುದಾಗಿ ಮಾತು ಮುಂದುವರಿಸಿ ಮೊಬೈಲ್ ಗೆ ANYDESK APP ಇನ್ ಸ್ಮಾಲ್ ಮಾಡುವಂತೆ ಹೇಳಿದ್ದಾರೆ. ನಂತರ ಸಿಮ್ ಬದಲಾವಣೆ ಶುಲ್ಕ ರೂ 10 ನ್ನು RECHARGECUBE ನಲ್ಲಿ ಡೆಬಿಟ್ ಕಾರ್ಡ್ ಮೂಲಕವೇ ಪಾವತಿಸಲು ತಿಳಿಸಿದ್ದಕ್ಕೆ ಪಾವತಿಸಿದ ಬಳಿಕ ಅಪರಿಚಿತ ವ್ಯಕ್ತಿಯು ಪಾವತಿಗೊಂಡಿಲ್ಲ ಎಂಬುದಾಗಿ ಹೇಳಿ ಬೇರೆ ಡೆಬಿಟ್ ಬಳಸುವಂತೆ ತಿಳಿಸಿದ್ದಾರೆ.
ಆದರೆ ಪ್ರವೀಣ್ ಜೋಷಿ ಅದನ್ನು ನಿರಾಕರಿಸಿದ್ದಾರೆ . ಸ್ವಲ್ಪ ಸಮಯದಲ್ಲಿ ಮತ್ತೆ ಇವರ ಮೊಬೈಲ್ ಗೆ OTP ಬಂದಿದ್ದರಿಂದ ಸಂಶಯಗೊಂಡು ತಕ್ಷಣವೇ ಕೆನರಾ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗಿ ಸಂಜೆ 06.45 ಹಾಗೂ 07.04 ಗಂಟೆಗೆ ಹಂತ ಹಂತವಾಗಿ ರೂ.24,311.52 / - ಹಾಗೂ ರೂ . 2,800 / - ನ್ನು ಬೇರೆ ವ್ಯಾಲೆಟ್ ಖಾತೆಗೆ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ .
ಈ ರೀತಿಯಾಗಿ ಒಟ್ಟು ರೂ . 29,951 / - ಹಣ ಪಡೆದು ವಂಚನೆ ಮಾಡಲಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 47/2021 ಕಲಂ 66 ( ಡಿ ) ಐಟಿ ಆಕ್ಟ್ ಮತ್ತು ಕಲಂ 419 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .