
ನಿಮ್ಮ ಮೊಬೈಲ್ ನಲ್ಲಿ ಈ APP ಇದ್ದರೆ ಕೂಡಲೆ ಡಿಲಿಟ್ ಮಾಡಿ
ಸ್ಮಾರ್ಟ್ ಪೋನ್ ನಲ್ಲಿ
ಸಿಗುವಂತಹ ಹಲವಾರು ಆ್ಯಪ್ ಗಳು ಉಪಯೋಗಕ್ಕೆ ಬರುತ್ತಲೆ ಇರುತ್ತದೆ. ಆದರೆ ಎಲ್ಲಾ
ಆ್ಯಪ್ ಗಳು ಉಪಯೋಗಕ್ಕೆ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಂದು ಆ್ಯಪ್ ಗಳು ನಿಮಗೆ
ಹಾನಿಯುಂಟು ಮಾಡುವ ಸಾಧಯತೆಯು ಇರುತ್ತದೆ. ಇಂತಹದರಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುವ ಎನಿ
ಡೆಸ್ಕ್ ಆ್ಯಪ್ ಕೂಡ ಒಂದು.
ಏನಿದು ANY DESK APP?
ಗೂಗಲ್ ಪ್ಲೇ ಸ್ಟೋರ್
ನಲ್ಲಿ ಸಿಗುವ ಈ ಆ್ಯಪ್ ಅಪಾಯಕಾರಿ ಆ್ಯಪ್ ಗಳಲ್ಲೊಂದು. ಎನಿ ಡೆಸ್ಕ್ ಆ್ಯಪ್ ನಿಂದ ನಿಮ್ಮ ಮೊಬೈಲ್
ನ ಕಂಟ್ರೋಲನ್ನು ಮತ್ತೊಬ್ಬರಿಗೆ ಕೊಡಬಹುದಾಗಿದೆ. ಉದಾಹರಣೆಗೆ ನೀವು ಎನಿ ಡೆಸ್ಕ್ ಆ್ಯಪ್ ನಿಮ್ಮ ಮೊಬೈಲ್
ನಲ್ಲಿ ಹಾಕಿದ್ದರೆ ಅದರಲ್ಲಿ ಬರುವ ಕೋಡನ್ನು ನೀಡಿದರೆ ಯಾರೂ ಕೂಡ ನಿಮ್ಮ ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಳ್ಳಬಹುದು.
ಎನಿ ಡೆಸ್ಕ್ ಕಂಟ್ರೋಲ್ ಅವರ ಕೈಗೆ ಸಿಕ್ಕಿದರೆ ನೀವು ಮೊಬೈಲ್ ನಲ್ಲಿ ಏನು ಮಾಡುತ್ತೀರಿ ಮತ್ತು ಏನು
ನೋಡುತ್ತೀರಿ ಎಂಬುದು ಲೈವ್ ಆಗಿ ಅವರಿಗೆ ನೋಡಬಹುದಾಗಿದೆ.
ಇದು ನಿಮ್ಮ ಖಾಸಗಿತನವನ್ನು ಇತರರ ಕೈಗೆ ನೀಡಿದಂತಾಗುತ್ತದೆ.
ಖಾಲಿ ಎನಿ ಡೆಸ್ಕ್ ಆ್ಯಪ್ ಇನ್ಸ್ಟಾಲ್ ಮಾಡಿದ ಕೂಡಲೆ ಈ ಅಪಾಯವಾಗುವುದಿಲ್ಲ.
ಎನಿ ಡೆಸ್ಕ್ ನ ಕೋಡನ್ನು ಯಾರಿಗಾದರೂ ತಿಳಿಸಿದರೆ ಅವರು ನಿಮ್ಮ ಮೊಬೈಲ್ ಕಂಟ್ರೋಲ್ ತೆಗೆದುಕೊಳ್ಳಲು
ಸಾಧ್ಯವಾಗುತ್ತದೆ. ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕಿಂಗ್
ವ್ಯವಹಾರ ಮಾಡುತ್ತಿದ್ದರೆ ಈ ಆ್ಯಪ್ ಇನ್ಸ್ಟಾಲ್ ಮಾಡದಂತೆ ನಿಮ್ಮ ಬ್ಯಾಂಕ್ ಆ್ಯಪ್ ಕೂಡ ಎಚ್ಚರಿಸುತ್ತದೆ.
ಇತ್ತೀಚೆಗೆ ಖದೀಮರು ಎನಿ ಡೆಸ್ಕ್ ಆ್ಯಪ್ ಮೂಲಕ ವಂಚನೆ ಮಾಡುತ್ತಿರುವ
ಪ್ರಕರಣ ಬೆಳಕಿಗೆ ಬರುತ್ತಿದೆ. ಎನಿ ಡೆಸ್ಕ್ ಆ್ಯಪ್ ಇನ್ಸ್ಟಾಲ್ ಮಾಡಿ ಅದರ ಕೋಡ್ ಪಡೆದು ಇತರ ವ್ಯವಹಾರ ಮಾಡಲು ತಿಳಿಸುತ್ತಾರೆ. ಅದರಲ್ಲಿ ಬರುವ ಓಟಿಪಿಯನ್ನು
ಪಡೆದುಕೊಳ್ಳದೆ ಮೊಬೈಲ್ ನಲ್ಲಿ
ಬರುವುದನ್ನು ಅವರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್
ನಲ್ಲಿ ನೋಡಿ ಪಡೆದುಕೊಂಡು ವಂಚನೆ ಮಾಡುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ
ಬರುತ್ತಿದೆ.
ಈ ಹಿನ್ನೆಲೆಯಲ್ಲಿ ನಿಮ್ಮ ಮೊಬೈಲ್ ನಲ್ಲಿ ಯಾವುದೆ ಕಾರಣಕ್ಕೂ ANY DESK APP
ಇನ್ಸ್ಟಾಲ್ ಮಾಡುವುದನ್ನು ತಪ್ಪಿಸಿಕೊಳ್ಳಿ. ಒಂದು ವೇಳೆ ಈಗಾಗಲೆ ಮಾಡಿದ್ದರೆ ಕೂಡಲೆ ಡಿಲಿಟ್
ಮಾಡಿಕೊಳ್ಳಿ.