ಹುಡುಗಿ ಬ್ರಾ ಗಾತ್ರ, ಸೊಂಟದ ಸುತ್ತಲತೆ ಇಷ್ಟಿರಬೇಕು.. ಮದುವೆಯಾಗಲು ಹೊರಟವನ ಡಿಮ್ಯಾಂಡ್....
Sunday, December 5, 2021
ಹೊಸದಿಲ್ಲಿ: ಇಲ್ಲೊಬ್ಬ ವ್ಯಕ್ತಿ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಆಕೆಯ ಉಡುಪು ಸೇರಿ ಇನ್ನಿತರ ಪಟ್ಟಿಯನ್ನು ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ತನ್ನನ್ನು ಮದುವೆಯಾಗುವವಳ ‘ಎತ್ತರ 5.2 ಅಡಿಯಿಂದ 5.6 ಇರಬೇಕು, 47-52 ಕೆಜಿ ತೂಕ ಇರಬೇಕು, ಸೊಂಟದ ಸುತ್ತಳತೆ 12-16 ಇಂಚು ಸಾಕು, ಬ್ರಾ ಗಾತ್ರ 32b ರಿಂದ 32c ಇರಬೇಕು, ಪಾದಗಳು 6-7 ಇಂಚು ಉದ್ದ ಇರಬೇಕು’ ಎಂದು ‘ಬೆಟರ್‌ಹಾಫ್.ಎಐ’ ಎಂಬ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನ ತನ್ನ ಪ್ರೊಫೈಲ್‌ನ ‘ಬಯೋ’ ವಿಭಾಗದಲ್ಲಿ ಬೇಡಿಕೆ ಇರಿಸಿದ್ದಾನೆ.
ಅಷ್ಟೇ ಅಲ್ಲದೆ ‘18-26 ವಯಸ್ಸಿನವಳಾಗಿರಬೇಕಂತೆ, ನಾಯಿಯನ್ನು ಪ್ರೀತಿಸುವ, ಮಕ್ಕಳನ್ನು ಇಷ್ಟಪಡದ, ಪ್ರವಾಸ ಪ್ರಿಯೆ ಆಗಿರಬೇಕು. 2ಎ ಕೆಟಗರಿಯವಳು, ಕುಟುಂಬಸ್ಥರು ಹಾಗೂ ಸಮಾಜದಲ್ಲಿ ಬೆರೆಯುವ ಮನಸ್ಥಿತಿ ಹೊಂದಿದವಳು, ಹಾಸ್ಯ ಮನೋಭಾವ ಇದ್ದು, ಮೆನಿಕ್ಯೂರ್/ ಪೆಡಿಕ್ಯೂರ್ ಮಾಡಿಸಿಕೊಳ್ಳುವ ಜತಗೆ ಸ್ವಚ್ಛತೆ ಕಾಪಾಡಿಕೊಳ್ಳುವವಳು ಆಗಿರಬೇಕು, ಸಿನಿಮಾ ವೀಕ್ಷಣೆ, ಸಭ್ಯ ಬಟ್ಟೆ ಧರಿಸುವವಳು, ಜತೆಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಇರುವವಳು ಆದರೆ ಮದುವೆಗೆ ಸಿದ್ಧ’ ಎಂದು ಪಟ್ಟಿ ಮಾಡಿದ್ದಾನೆ. ಸದ್ಯ ಈತನ ಹಲವು ಬೇಡಿಕೆಗಳ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಂಸ್ಥೆ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.