
ಮೊಬೈಲ್ ಆಪ್ ಮುಖಾಂತರ 5 ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿಗೆ ಮಂಗಳೂರು ಅಂಚೆ ವಿಭಾಗದಿಂದ ಚಾಲನೆ
Saturday, December 11, 2021
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಮಂಗಳೂರು ಅಂಚೆ ವಿಭಾಗದ ಮೂಲಕ ಇಂದು ಮುಕ್ಕ ಶಾಖಾ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರವರ ಮೊಬೈಲ್ ನಲ್ಲಿನ ಆ್ಯಪ್ ಮುಖಾಂತರ ( CELC Appನ ಮೂಲಕ) 5 ವರ್ಷದೊಳಗಿನ ಮಗುವಿನ ಆಧಾರ್ ನೋಂದಣಿ ಸೇವೆಯನ್ನು ಆರಂಭಿಸಲಾಯಿತು.
ಸಿಂಚನ ಎಂಬ ಮೂರು ವರ್ಷದ ಮಗುವಿನ ಆಧಾರ್ ನೋಂದಣಿಯನ್ನು ಇಂದು ಈ ಮೊಬೈಲ್ ಆ್ಯಪ್ ಮುಖಾಂತರ ಮಾಡಲಾಯಿತು.
ಈ ನೋಂದಣಿಯನ್ನು ಮುಕ್ಕ ಶಾಖಾ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಾಲಿನಿ ಭಟ್ ಅವರು ಮಾಡಿದ್ದರು.
ಈ ಸೇವೆಯನ್ನು ಹಂತಹಂತವಾಗಿ ಮುಂದಿನ ದಿನಗಳಲ್ಲಿ ಇತರ ಅಂಚೆ ಕಚೇರಿಗಳಿಗೂ ವಿಸ್ತರಿಸಲಾಗುವುದು ಎಂದು ಮಂಗಳೂರು
ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಹರ್ಷ ತಿಳಿಸಿದ್ದಾರೆ