ಪೋನ್ ಸ್ವೀಕರಿಸದ ಗರ್ಲ್ ಫ್ರೆಂಡ್- ದುಡುಕಿನ ನಿರ್ಧಾರ ಕೈಗೊಂಡ ಯುವಕ!
Friday, December 10, 2021
ಮುಂಬೈ: ತನ್ನ ಪ್ರಿಯತಮೆ ಗೆ ಎಷ್ಟು ಕರೆ ಮಾಡಿದರೂ ಫೋನ್‌ಕಾಲ್ ಸ್ವೀಕರಿಸುತ್ತಿಲ್ಲ ಎಂದು ನೊಂದುಕೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಡಿಯೋನಾರ್ ಪ್ರದೇಶದಲ್ಲಿ ನಡೆದಿದೆ.
24 ವರ್ಷದ ಮಾನವ್ ಲಾಲ್ವಾನಿ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತನ್ನ ಸ್ನೇಹಿತರ ಜತೆ ನಿನ್ನೆ ಮಧ್ಯರಾತ್ರಿಯವರೆಗೂ ಪಾರ್ಟಿಯಲ್ಲಿ ಇದ್ದ. ಆ ಪಾರ್ಟಿಯಲ್ಲಿ ಈ ಯುವತಿ ಕೂಡ ಇದ್ದಳು. ಪಾರ್ಟಿ ಮುಗಿಸಿ ವಾಪಸ್ ಬಂದಾಗ ಯುವತಿಗೆ ಮಾನವ್ ಕರೆ ಮಾಡಿದ್ದಾನೆ. ಆದರೆ ಎಷ್ಟೇ ಆದರೂ ಆಕೆ ಕರೆ ಸ್ವೀಕರಿಸಲಿಲ್ಲ. ಅದರಿಂದ ಬೇಸತ್ತ ಯುವಕ ಬೆಳಗ್ಗೆ ಟೆರೇಸ್ ಮೇಲೆ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುತ್ತಿದೆ.