
ಕಾಸರಗೋಡು- ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕ್ತೇನೆ ಎಂದು 16 ವರ್ಷದ ಬಾಲಕಿಗೆ ಬ್ಲ್ಯಾಕ್ ಮೇಲ್
Sunday, December 12, 2021
ಕಾಸರಗೋಡು : ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಾಲಕಿಯೊಬ್ಬಳಿಗೆ ಬೆದರಿಕೆ ರಾಕೇಶ್ ಯೊಡ್ಡಿ ಪ್ರಕರ ಣದಲ್ಲಿ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ವಿವಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ರಾಕೇಶ್ ( 21 ) ಬಂಧಿತ ಆರೋಪಿ
ಕಾಸರಗೋಡಿನ 16 ರ ಹರೆಯದ ಬಾಲಕಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪರಿಚಯಿಸಿಕೊಂಡು ಈತ ಫೊಟೋ ಪಡೆದು ಕೊಂಡಿದ್ದ .
ಆ ಬಳಿಕ 10 ಲಕ್ಷ ರೂ . ನೀಡಬೇಕು ಇಲ್ಲದಿದ್ದರೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದ. ಇದಕ್ಕೆ ಒಪ್ಪದ ಬಾಲಕಿ ಹಾಗೂ ಆಕೆಯ ಹೆತ್ತವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿದ ಕಾಸರಗೋಡು ಪೊಲೀಸರು ಪೋಕ್ಸ್ ಪ್ರಕರಣ ದಾಖಲಿಸಿದ್ದಾರೆ .