-->

2 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ

2 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ


ಮೈಸೂರು: 2 ವರ್ಷದ ಮಗುವನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗಟ್ಟಿವಾಡಿ ಗ್ರಾಮದಲ್ಲಿ ನಡೆದಿದೆ. 

2 ವರ್ಷದ ಮಗು ಮೋಕ್ಷಿತ್ ಹಾಗೂ 22 ವರ್ಷದ ಅನ್ನಪೂರ್ಣ ಮೃತಪಟ್ಟವರು


ತನ್ನ 2 ವರ್ಷದ ಗಂಡು ಮಗು ಮೋಕ್ಷಿತ್ ನನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಅನ್ನಪೂರ್ಣ ಕೊಲೆ ಮಾಡಿದ್ದಾಳೆ.  ಬಳಿಕ ತಾನೂ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅವರ ಪತ್ನಿ ಹಾಗೂ ಮಗು ಇವರಾಗಿದ್ದು, ಈ ಘಟನೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ

ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದ ಅನ್ನಪೂರ್ಣರನ್ನು ಮಹದೇವಪ್ರಸಾದ್ ಕಳೆದ  ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಗೋವಿಂದ ರಾಜು, ಸಿಪಿಐ ಲಕ್ಷ್ಮೀಕಾಂತ ತಳವಾರ, ದೊಡ್ಡಕವಲಂದೆ ಪಿಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99