
ಮಂಗಳೂರಿನಲ್ಲಿ ಮಹಿಳೆಯ ಒಳ ಉಡುಪಿನಲ್ಲಿ 739 ಗ್ರಾಂ ಚಿನ್ನ!
ಮಂಗಳೂರು ; ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯ ಒಳ ಉಡುಪಿನಲ್ಲಿ ಅಡಗಿಸಿ ಸಾಗಾಟ ಮಾಡುತ್ತಿದ್ದ 739 ಗ್ರಾಂ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ಜಿಲ್ಲೆಯ ತಳಂಗರೆ ಮೂಲದ ಮಹಿಳಾ ಪ್ರಯಾಣಿಕೆಯನ್ನು ಬಂಧಿಸಿದ್ದಾರೆ. ಈಕೆ ದುಬಾಯಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಳು.
ಈಕೆಯ ಬಳಿ 24 ಕ್ಯಾರಟ್ ನ 36,43, 270 ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬೂದು ಬಣ್ಣದ ಪೇಪರ್ ನಲ್ಲಿ ಅಡಗಿಸಿ ಒಳ ಉಡುಪಿನಲ್ಲಿ ಇಟ್ಟು ಹೊಲಿದು ಸಾಗಾಣಿಕೆ ಮಾಡುತ್ತಿದ್ದಳು. ಮಹಿಳಾ ಪ್ರಯಾಣಿಕೆ ಮತ್ತು ಚಿನ್ನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.