ಆ ಬಾರ್ ನ ರಹಸ್ಯ ಕೋಣೆಯಲ್ಲಿದ್ದರು 17 ಯುವತಿಯರು- ಕನ್ನಡಿ ಹೊಡೆದಾಗ ಬೆಳಕಿಗೆ ಬಂತು ಘಟನೆ! (VIDEO)
ಮುಂಬಯಿ: ಮುಂಬಯಿಯ ಅಂಧೇರಿಯ ದೀಪಾ ಎಂಬ ಹೆಸರಿನ ಬಾರ್ ನಲ್ಲಿ ರಹಸ್ಯ ಕೋಣೆಯಲ್ಲಿ 17
ಬಾರ್ ಡ್ಯಾನ್ಸ್ ಗರ್ಲ್ಸ್ ಪತ್ತೆಯಾಗಿದ್ದಾರೆ.
ಕೊರೊನಾ ನಿಮಯವನ್ನು
ಉಲ್ಲಂಘಿಸಿ ಮುಂಬಯಿನ ಅಂಧೇರಿ ಪ್ರದೇಶದಲ್ಲಿರುವ ಈ ಬಾರ್ ಮೇಲೆ ಕಳೆದ ಶನಿವಾರ ರಾತ್ರಿ ಪೊಲೀಸರು
ದಾಳಿ ನಡೆಸಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ನಿಯಮಗಳನ್ನು ಗಾಳಿಗೆ ತೂರಿ ಬಾರ್ ಡ್ಯಾನ್ಸರ್‌ಗಳಿಂದ
ಬಾರ್‌ಗಳಲ್ಲಿ ಬಹಿರಂಗವಾಗಿ ನೃತ್ಯ ಮಾಡಿಸಲಾಗುತ್ತಿತ್ತು ಎಂಬ ಆರೋಪದ ಮೇರೆಗೆ ಈ ದಾಳಿ ನಡೆಸಲಾಗಿತ್ತು.
NGO ವೊಂದು ನೀಡಿದ ಮಾಹಿತಿ ಮೇರೆಗೆ ಶನಿವಾರ ರಾತ್ರಿ 11.30ರ ಸುಮಾರಿಗೆ
ಪೊಲೀಸರು ದಾಳಿ ಮಾಡಿದಾಗ ಬಾರ್ ಗರ್ಲ್ಸ್ ಕುಣಿದು
ಕುಪ್ಪಳಿಸುತ್ತಿದ್ದರು. ಆದರೆ ಪೊಲೀಸ್ ದಾಳಿ ಆದ ಕೆಲವೆ ಸಮಯದಲ್ಲಿ ಅವರೆಲ್ಲ ಕಣ್ಮರೆಯಾಗಿದ್ದರು.
ಪೊಲೀಸರು ಡ್ಯಾನ್ಸ್‌ಬಾರ್‌ನ ಇಂಚಿಂಚೂ ಬಿಡದೆ ಶೋಧ ಕಾರ್ಯವನ್ನು ನಡೆಸಿದರೂ ಪ್ರಯೋಜವಾಗಿರಲಿಲ್ಲ.
ಬಾರ್ ಮ್ಯಾನೇಜರ್, ಕ್ಯಾಷಿಯರ್, ವೇಟರ್‌ಗಳನ್ನು ವಿಚಾರಣೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.ಅವರೆಲ್ಲ
ಬಾರ್‌ನಲ್ಲಿ ಡ್ಯಾನ್ಸರ್‌ಗಳೆ ಇಲ್ಲ ಎಂದು ವಾದಿಸಿದ್ದರು
ಬಾರ್‌ನ ಮೇಕಪ್ ರೂಂಗೆ ಹೋಗಿ ನೋಡಿದ ಪೊಲೀಸರಿಗೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ರೂಮಿನ ಗೋಡೆಗೆ ಅಂಟಿಸಿದ್ದ
ಕನ್ನಡಿಯನ್ನು ನೋಡಿದಾಗ ಸಂಶಯ ಆರಂಭವಾಗಿಕನ್ನಡಿಯನ್ನು ದೊಡ್ಡ ಸುತ್ತಿಗೆಯಿಂದ ಒಡೆದಾಗ ಡ್ಯಾನ್ಸ್
ಬಾರ್‌ನಲ್ಲಿ 17 ಯುವತಿಯರು ಪತ್ತೆಯಾಗಿದ್ದಾರೆ.
ಒಂದು ಗಂಟೆಗಳ ಶ್ರಮಪಟ್ಟು
ಗೋಡೆಗೆ ಅಂಟಿಸಿದ್ದ ಗಾಜು ತೆರವು ಮಾಡಿದಾಗ ಕನ್ನಡಿಯ ಹಿಂದೆ ದೊಡ್ಡ ರಹಸ್ಯ ಕೋಣೆ ಪತ್ತೆಯಾಗಿದೆ.
ಅದರೊಳಗೆ ಒಟ್ಟು 17 ಯುವತಿಯರು ಅಡಗಿದ್ದರು.ಈ ರಹಸ್ಯ ಕೊಠಡಿಗೆ ಹವಾನಿಯಂತ್ರಣ ಅಳವಡಿಸಲಾಗಿತ್ತು.
ತಂಪು ಪಾನೀಯ, ಆಹಾರ ಪೊಟ್ಟಣಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿವೆ..