ಮಂಗಳೂರಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಮೂವರಿಂದ ಗ್ಯಾಂಗ್ ರೇಪ್!
Tuesday, December 14, 2021
ಮಂಗಳೂರಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳ ಮೇಲೆ ಮೂವರಿಂದ ಗ್ಯಾಂಗ್ ರೇಪ್ ನಡೆದ ಘಟನೆ ಮಂಗಳೂರಿನ ಮುಡಿಪುವಿನಲ್ಲಿ ನಡೆದಿದೆ.
ಈ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮುಡಿಪುವಿನ ಅಪಾರ್ಟ್ ಮೆಂಟ್ ವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ .
ಈ ಬಾಲಕಿಯನ್ನು ಮೂವರು ಮನೆಯಿಂದ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತಾಯಿ ದೂರು ನೀಡಿದ್ದಾರೆ. ಬಾಲಕಿಗೆ ಮದ್ಯಸೇವನೆ ಮಾಡಿಸಿ ಅಮಲು ಪದಾರ್ಥ ತಿನ್ನಿಸಿ ಅತ್ಯಾಚಾರ ಎಸಗಲಾಗಿದೆ.
ಇದೇ ಬಾಲಕಿಗೆ ಮೊದಲೊಮ್ಮೆ ಕಿರುಕುಳ ನೀಡಿ ಪೋಕ್ಸೋ ಪ್ರಕರಣವಿದ್ದ ಆರೋಪಿ.
ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರಲ್ಲಿ ಓರ್ವ ಆರೋಪಿ ಈ ಹಿಂದೆಯೂ ಇದೇ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ.ಚಿಲಿಂಬಿಗುಡ್ಡೆ ಎಂಬಲ್ಲಿ ಈ ಬಾಲಕಿಯನ್ನು ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಈತನನ್ನು ಪೋಕ್ಸೋ ಪ್ರಕರಣದಡಿ ಬಂಧಿಸಲಾಗಿತ್ತು. ಈ ಆರೋಪಿ ಈ ಪ್ರಕರಣದ ದಾರಿ ತಪ್ಪಿಸಲು ನಾಗಬನ ಹಾನಿಮಾಡಲು ಕೆಲ ಹುಡುಗರಿಗೆ ದುಡ್ಡನ್ನು ನೀಡಿ ಮಾಡಿಸಿದ್ದ. ಇದೀಗ ಇದೇ ಬಾಲಕಿಯ ಮೇಲೆ ಗೆಳೆಯರೊಂದಿಗೆ ಸೇರಿ ಗ್ಯಾಂಗ್ ರೇಪ್ ನಲ್ಲಿ ಭಾಗಿಯಾಗಿದ್ದಾನೆ.
ಹೆಡ್ ಕಾನ್ಸ್ ಟೇಬಲ್ ಅಮಾನತು!
ಇದೇ ಬಾಲಕಿ ಪ್ರಕರಣದ ಸಂಬಂಧ ಪೊಲೀಸ್ ಠಾಣೆಗೆ ಬಂದಿದ್ದ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ.ಬಳಿಕ ಆತ ಆಕೆಯ ಜೊತೆಗೆ ಚಾಟ್ ಮಾಡಿ ಅನುಚಿತವಾಗಿ ನಡೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದ್ದು ಸೇವೆಯಿಂದ ಅಮಾನತು ಮಾಡಲಾಗಿದೆ.