
Zee Newsನ ಸುಧೀರ್ ಚೌಧರಿಯನ್ನು UAE ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು
Tuesday, November 23, 2021
ಅಬುಧಾಬಿ: ನವೆಂಬರ್ 25, 26ರಂದು ಅಬುದಾಭಿ ಚಾರ್ಟೆಡ್ ಅಕೌಂಟ್ ಒಕ್ಕೂಟವು ಅಬುಧಾಬಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭಾಷಣಕಾರನಾಗಿ zee newsನ ಸುಧೀರ್ ಚೌಧರಿಗೆ ಆಮಂತ್ರಣ ನೀಡಲಾಗಿತ್ತು. ಇದೀಗ ಅವರನ್ನು ಆಯೋಜಕರು ಕಾರ್ಯಕ್ರಮದಿಂದ ಕೈ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಚೌಧರಿಯನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಯುಎಇಯ ರಾಜಕುಮಾರಿ ಹಿಂದ್ ಬಿಂತ್ ಫೈಸಲ್ ಅಲ್ ಖಾಸಿಂ ತೀವ್ರವಾಗಿ ವಿರೋಧಿಸಿದ್ದರು.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿದ್ದ ರಾಜಕುಮಾರಿ 'ನೀವು ಯಾಕೆ ಒಬ್ಬ ಅಸಹಿಷ್ಣು ಭಯೋತ್ಫಾಧಕನನ್ನು ಯುಎಇಗೆ ಆಮಂತ್ರಿಸುತ್ತಿದ್ದೀರಿ' ಎಂದು ಸಂಘಟಕರಿಗೆ ಪ್ರಶ್ನಿಸಿದ್ದಾರೆ.
'ಸುಧೀರ್ ಚೌಧರಿ ಓರ್ವ ಬಲಪಂಥೀಯ ನಿರೂಪಕನಾಗಿದ್ದು, ಆತನ ಎಲ್ಲಾ ಕಾರ್ಯಕ್ರಮಗಳು ಮುಸ್ಲಿಮರನ್ನು ಗುರಿಯಾಗಿಸಿಯೇ ನಡೆಯುತ್ತಿದೆ' ಎಂದಿರುವ ರಾಜಕುಮಾರಿ ಇಂತಹ 'ಇಸ್ಲಾಮಾಫೋಬ್ ಅನ್ನು ಯಾಕೆ ನನ್ನ ಶಾತಿಯುತ ಯುಎಇ ಗೆ ಆಮಂತ್ರಿಸುತ್ತಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.
ಇದೀಗ ಸಂಘಟಕರು ಸುಧೀರ್ ಚೌಧರಿಯನ್ನು ಕಾರ್ಯಕ್ರಮದಿಂದ ಕೈಬಿಟ್ಟಿದ್ದಾರೆ ಎಂದು ಸ್ವತಃ ರಾಜಕುಮಾರಿಯೇ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.