
ಹಳಿಯ ಮೇಲೆ PUB-G ಆಡುತ್ತಿದ್ದ ವಿದ್ಯಾರ್ಥಿಗಳಿಬ್ಬರ ಮೇಲೆ ಹರಿದ ರೈಲು
ಮಥುರಾ: ರೈಲು ಹಳಿಗಳ ಮೇಲೆ ಕುಳಿತು ಪಬ್ ಜಿ ಆಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ರೈಲು ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದಲ್ಲಿ ನಡೆದಿದೆ.
ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕಪಿಲ್ (18) ಮತ್ತು ರಾಹುಲ್ (16) ಮೃತ ವಿದ್ಯಾರ್ಥಿಗಳು. ಇವರಿಬ್ಬರು ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಕುಳಿತು ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳದಲ್ಲಿ ಮೊಬೈಲ್ ಗಳು ಸಿಕ್ಕಿದ್ದು ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.