
ಕೆಲಸದ ಆಮಿಷವೊಡ್ಡಿ ಅಪ್ರಾಪ್ತೆಯನ್ನು ಮುಂಬೈಗೆ ಸಾಗಿಸುತ್ತಿದ್ದ ವ್ಯಕ್ತಿ ಅಂದರ್...
Wednesday, November 24, 2021
ಕಲಬುರಗಿ: ಕೆಲಸದ ಆಮಿಷವೊಡ್ಡಿ 12 ವರ್ಷದ ಬಾಲಕಿಯನ್ನು ಮುಂಬೈಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ ಪೊಲೀಸರುುು ವಶಕ್ಕೆ ಪಡೆದಿದ್ದಾರೆೆ.
ಮಹಾರಾಷ್ಟ್ರ ಮೂಲದ ವಿವೇಕ್ ಎಂಬಾತ ಬೆಂಗಳೂರಿನ ಕ್ಯಾಂಟೀನ್‌ವೊಂದರಲ್ಲಿ ತರಕಾರಿ ಕಟಿಂಗ್ ಕೆಲಸ ಮಾಡುತ್ತಿದ್ದ ಬಾಲಕಿಗೆ ಕೆಲಸದ ಆಮಿಷವೊಡ್ಡಿದ್ದಾನೆ. ಇದನ್ನು ನಂಬಿದ ಬಾಲಕಿಯ ಮನೆಯವರು ಆಕೆಯನ್ನು ಈತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ವಿವೇಕ್ ಆಕೆಯನ್ನು ದೆಹಲಿಗೆ ಕರೆದೊಯ್ಯುವ ಬದಲು ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದ.ಮಾರ್ಗಮಧ್ಯೆ ಅನುಮಾನಗೊಂಡ ಬಾಲಕಿ ಕಲಬುರಗಿ ಸಮೀಪಿಸುತ್ತಿದ್ದಂತೆ ರೈಲು ನಿಲ್ದಾಣದಲ್ಲಿ ಇಳಿದಳು. ಆ ಬಳಿಕ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿ, ವಿಚಾರಿಸಿದ ಸಾರ್ವಜನಿಕರು ಚೈಲ್ಡ್ ಲೈನ್ ಅಧಿಕಾರಿಗಳ ಗಮನಕ್ಕೆ ತಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಆದರೆ ವಿವೇಕ್, ತಾನು ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕೆಯ ಮನೆಯವರೇ ಕೆಲಸ ಕೊಡಿಸು ಅಂತ ಹೇಳಿ ತನ್ನ ಜೊತೆ ಕಳಿಸಿದ್ದಾರೆ. ಆಕೆಯನ್ನು ಕೆಲಸ ಕೊಡಿಸಲು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ದಾರಿಮಧ್ಯೆ, ತಾನು ಬರುವುದಿಲ್ಲ ಎಂದು ಬಾಲಕಿ ಹಠ ಹಿಡಿದಿದ್ದಾಳೆ. ಹೀಗಾಗಿ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದೇನೆ. ಆದರೆ ಈ ಬಾಲಕಿ ತನ್ನೊಂದಿಗೆ ಜಗಳವಾಡಿದ್ದಾಳೆ. ಆಕೆಯನ್ನು ಅಕ್ರಮವಾಗಿ ಸಾಗಿಸುತ್ತಿರಲಿಲ್ಲ. ಅವರ ಮನೆಯವರ ಒಪ್ಪಿಗೆ ಮೇರೆಗೆ ಆಕೆಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ವಿವೇಕ್ ಹೇಳಿದ್ದಾನೆ.
ಆರೋಪಿ ವಿವೇಕ್ನನ್ನು ವಶಕ್ಕೆ ಪಡೆದ ವಾಡಿ ರೈಲ್ವೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.