ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಮಾಜಿ ಪ್ರೇಯಸಿಗೆ ಬ್ಲ್ಯಾಕ್ಮೇಲ್ ... ಮೊಬೈಲ್ ಕದಿಯಲು ಸುಪಾರಿ ಕೊಟ್ಟ ಯುವತಿ...!!
Thursday, November 25, 2021
ಬೆಂಗಳೂರು: ಕೊಡುಗೆಹಳ್ಳಿಯ ಕಾಂತಿ ಸ್ವೀಟ್ಸ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಎಂಬಾತ 2 ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿದ್ದ.ಇಬ್ಬರೂ ಏಕಾಂತದಲ್ಲಿ ಹಲವು ಬಾರಿ ಕಾಲ ಕಳೆದಿದ್ದ ಸಂದರ್ಭ ಆತ ಆಕೆಯ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ಕ್ಲಿಕ್ಕಿಸಿಕೊಂಡಿದ್ದಾನೆ. ನಂತರ ಇಬ್ಬರ ನಡುವೆ ಮನಸ್ತಾಪವಾಗಿ ದೂರವಾಗಿದ್ದರು. ಆದರೆ ಆಕೆಯನ್ನು ಬಿಟ್ಟಿರಲಾರದೆ ಆಕೆಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುವುದಲ್ಲದೇ ಲೈಂಗಿಕವಾಗಿ ಸಹಕರಿಸುವಂತೆ ಬೆದರಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿಯೂ ಹೇಳಿದ್ದ.
ಇದರಿಂದ ಹೆದರಿದ ಯುವತಿ, ತನ್ನ ಸ್ನೇಹಿತನಿಗೆ ಎಲ್ಲವನ್ನೂ ಹೇಳಿ ಖಾಸಗಿ ಫೋಟೋಗಳಿದ್ದ ಆ ಮೊಬೈಲ್ ಫೋನ್ ಅವನಿಂದ ತೆಗೆದುಕೊಂಡು ಬರುವಂತೆ ಹೇಳಿದ್ದಾಳೆ. ಅದರಂತೆ ನ. 16ರಂದು ಮಧ್ಯರಾತ್ರಿ ತೆರಳಿದ್ದ ನಾಲ್ಕು ಜನರ ಗುಂಪು ಸಂತೋಷ್ ವಾಸವಿದ್ದ ಕೊಡಿಗೆಹಳ್ಳಿಯ ನಿವಾಸಕ್ಕೆ ತೆರಳಿ ಮನೆಯಲ್ಲಿದ್ದ ಸಂತೋಷ್ ಹಾಗೂ ಸ್ನೇಹಿತರನ್ನು ಬೆದರಿಸಿ ಮನೆಯಲ್ಲಿದ್ದ ಮೂರು ಮೊಬೈಲ್ಗಳನ್ನು ರಾಬರಿ ಮಾಡಿದ್ದರು. ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆಯಲ್ಲಿ ರಾಬರಿ ಕೇಸ್ ದಾಖಲಾಗಿತ್ತು. ಸಂತೋಷ್ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿಚಾರಣೆ ಮಾಡಿದಾಗ ಅಸಲಿ ವಿಷಯ ಬಯಲಾಗಿದೆ.
ಈ ಘಟನೆ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಯುವತಿ ಸಂತೋಷ್ ತನ್ನ ಮೊಬೈಲ್ನಲ್ಲಿ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ನೀಡಿದ ದೂರಿನಡಿ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.