
ಟಿಕ್ ಟಾಕ್ ನಲ್ಲಿ ಶುರುವಾದ ಇವರಿಬ್ಬರ ಪ್ರೇಮ ಸೂಸೈಡ್ ನಲ್ಲಿ ಅಂತ್ಯ... ಅಷ್ಟಕ್ಕೂ ನಡೆದಿದ್ದೇನು ಗೊತ್ತಾ..?
Thursday, November 25, 2021
ಬೆಂಗಳೂರು: ಟಿಕ್ಟಾಕ್ ಮೂಲಕವೇ ಇಬ್ಬರ ಪ್ರೀತಿ ಶುರುವಾಗಿ ಇದೀಗ ದುರಂತ ಅಂತ್ಯ ಕಂಡಿದೆ.
17 ವರ್ಷದ ಹುಡುಗಿ ರಕ್ಷಿತಾ ತಮ್ಮ ಮನೆಯಲ್ಲಿ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಪ್ರಿಯಕರ 21 ವರ್ಷದ ಮನೋಜ್ ಸಹ ಕೆಲವೇ ನಿಮಿಷಗಳಲ್ಲಿ ರಾಜಾನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹನಿಯೂರು ಗ್ರಾಮದಲ್ಲಿ ತನ್ನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಜೋಡಿ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಯುವಕ ಆಗಾಗ ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದ.
ಮೂಲಗಳ ಪ್ರಕಾರ ಇವರಿಬ್ಬರ ಪ್ರೀತಿಯ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾಗಿ ಮದುವೆ ವಿಚಾರ ಸಹ ಚರ್ಚೆ ಆಗಿತ್ತಂತೆ. ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಯೋಚನೆ ಮಾಡೋಣ ಎಂದು ಎರಡು ಕುಟುಂಬಸ್ಥರು ಹೇಳಿದ್ದರಂತೆ. ಆದರೆ, ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಹಾಗೂ ರಾಜಾನಕುಂಟೆಯ ಪೊಲೀಸರು ಇಬ್ಬರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.