
ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕವಿತಾ ಗೌಡ ಕಿಡ್ನಾಪ್...!! ಸಿಸಿಟಿವಿಯಲ್ಲಿ ಸರಿಯಾಯ್ತು ಭಯಾನಕ ದೃಶ್ಯ
Thursday, November 25, 2021
ಬೆಂಗಳೂರು: ನಟಿ ಕವಿತಾ ಗೌಡ ಅವರ ಅಪಹರಣದ ಭಯಾನಕ ಸಿಸಿಟಿವಿ ಫುಟೇಜ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಲಕ್ಷ್ಮಿ ಬಾರಮ್ಮ ಧಾರವಾಹಿಯ ಚಿನ್ನು ಪಾತ್ರಧಾರಿಯಾಗಿ ಮನೆಮಾತಾಗಿರುವ ತಮ್ಮ ನಟಿಯ ಕಿಡ್ನಾಪ್ ಆಗಿರುವುದನ್ನು ಕೇಳಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.
ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಸೆಲ್ಫಿ ಕೇಳುವ ನೆಪದಲ್ಲಿ ಕವಿತಾ ಅವರನ್ನು ಹತ್ತಿರ ಕರೆದಿದ್ದಾನೆ. ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ ಕವಿತಾ ಆ ವ್ಯಕ್ತಿಗೆ ಸೆಲ್ಫಿ ನೀಡಲು ತಯಾರಾಗಿ ಹತ್ತಿರ ಹೋಗಿದ್ದಾರೆ. ಅದೇ ವೇಳೆ ಆ ವ್ಯಕ್ತಿ ಸೆಲ್ಫಿ ನೆಪದಲ್ಲಿ ಕಾರಿನ ಹತ್ತಿರ ಕರೆದುಕೊಂಡು ಹೋಗಿದ್ದಾನೆ. ನಂತರ ಕಾರಿನ ಒಳಗಿದ್ದ ಇನ್ನೊಬ್ಬ ವ್ಯಕ್ತಿ ಕವಿತಾರನ್ನು ಕಾರಿನೊಳಕ್ಕೆ ನೂಕಿದ್ದಾನೆ. ಇಬ್ಬರೂ ಸೇರಿ ನಟಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಕತ್ ವೈರಲ್ ಆಗಿದೆ.
ಇದೀಗ ಯಾರು ಅಪಹರಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ. ಇದು ನಿಜವಾಗಿ ನಡೆದ ಅಪಹರಣವಲ್ಲ ಅಂದರೆ, ಕವಿತಾ ಅವರ ‘ಗೋವಿಂದ ಗೋವಿಂದ’ ಇದೇ 26ರಂದು ಬಿಡುಗಡೆ ಆಗುತ್ತಿದೆ. ಪ್ರಚಾರದ ದೃಷ್ಟಿಯಿಂದ ಚಿತ್ರತಂಡ ಚಿತ್ರದ ತುಣುಕೊಂದನ್ನು ರಿಲೀಸ್ ಮಾಡಲಾಗಿದ್ದು, ಈ ದೃಶ್ಯ ಕೂಡ ಅದೇ ಚಿತ್ರದ್ದಾಗಿದೆ. ಕಾಮಿಡಿ ಥ್ರಿಲ್ಲರ್ ಚಿತ್ರವಾಗಿರುವ ‘ಗೋವಿಂದ ಗೋವಿಂದ’ ಕುರಿತು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಲು ಹೀಗೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.