ಮೊಳೆಯ ಮೂಲಕ ಕಲಾಕೃತಿ ರಚಿಸಿ ವಿಶ್ವ ದಾಖಲೆ ಬರೆದ ಮೂಡುಬಿದಿರೆಯ ತಿಲಕ್ ಕುಲಾಲ್...!!
Saturday, November 20, 2021
ಮೂಡುಬಿದಿರೆ: ಮೂಡುಬಿದಿರೆ ಒಂಟಿಕಟ್ಟೆಯ ನಿವಾಸಿಯಾದ ತಿಲಕ್ ಕುಲಾಲ್ ರವರು ಮೊಳೆಯಲ್ಲಿ ಮಹಾಗಣಪತಿಯ ಕಲಾಕೃತಿಯನ್ನು ರಚಿಸಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ತಿಲಕ್ ಕುಲಾಲ್ ರವರು ತಮ್ಮ ಜೊತೆಗಾರನದ ಅಕ್ಷಿತ್ ಅವರೊಂದಿಗೆ ಸೇರಿ ಸತತವಾಗಿ 5 ಗಂಟೆಯಲ್ಲಿ 6,666 ಕಬ್ಬಿಣದ ಮೊಳೆಯನ್ನು (0.8 ಇಂಚು) ಬಳಸಿಕೊಂಡು ಹಲಗೆಯಲ್ಲಿ ಮಹಾಗಣಪತಿಯ ಕಲಾಕೃತಿಯನ್ನು ರಚಿಸಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಏಕ ಕಾಲಕ್ಕೆ 3 ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡು ( Indian Book of Records, Asia Book of Records, World Record of India)
ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ .