ಹೊಸವರ್ಷದಲ್ಲಿ ಈ 4 ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ....
Saturday, November 20, 2021
ನವದೆಹಲಿ :ಹೊಸ ವರ್ಷದಲ್ಲಿ ನಾಲ್ಕು ರಾಶಿಯವರಿಗೆ ಶನಿಕಾಟ ಇರುವುದಿಲ್ಲ. ಪ್ರಸ್ತುತ ಶನಿ ಮಕರ ರಾಶಿಯಲ್ಲಿದ್ದಾನೆ. ಇದೀಗ 2022 ರಲ್ಲಿ, ಶನಿಯು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ಸಮಯದಲ್ಲಿ ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಈ ಅವಧಿಯಲ್ಲಿ ಧನು ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ದೊರೆಯಲಿದೆ. ಮತ್ತೊಂದೆಡೆ, ಮಿಥುನ ಮತ್ತು ತುಲಾ ರಾಶಿಯವರು ಕೂಡಾ ಇದರಿಂದ ಮುಕ್ತಿ ಹೊಂದಲಿದ್ದಾರೆ.ಮಕರ ರಾಶಿಯವರಿಗೆ ಶನಿ ಸಾಡೇ ಸತಿಯ ಕೊನೆಯ ಹಂತ ಆರಂಭವಾಗಲಿದ್ದು, ಕುಂಭ ರಾಶಿಯವರಿಗೆ ಎರಡನೇ ಹಂತ ಪ್ರಾರಂಭವಾಗುತ್ತದೆ.
ಶನಿಯು 12 ಜುಲೈ 2022 ರಿಂದ 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಮೀನ ರಾಶಿಯವರಿಗೆ ಕೆಲಕಾಲ ಶನಿಕಾಟದಿಂದ ಮುಕ್ತಿ ಸಿಗಲಿದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು ಕೂಡಾ ಶನಿಯ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಶನಿಯ ದೃಷ್ಟಿ ಧನು ರಾಶಿ, ಮಕರ, ಕುಂಭ, ಮಿಥುನ, ತುಲಾ ರಾಶಿಯ ಮೇಲೆ ಇರುತ್ತದೆ. ಆದರೆ ಮೇಷ (Aries), ವೃಷಭ, ಸಿಂಹ (Leo) ಮತ್ತು ಕನ್ಯಾ ರಾಶಿಯ ಜನರಿಗೆ ಶನಿ ಕಾಟ ಇರುವುದಿಲ್ಲ.