ನಿಮ್ಮ ಬಳಿ ಹರಿದ ನೋಟು ಇದೆಯಾ? ಅದನ್ನು ಹೀಗೆ ಬದಲಾಯಿಸಿ
Sunday, November 21, 2021
ನವದೆಹಲಿ: ಕೆಲವೊಮ್ಮೆ ನಮಗೆ ತಿಳಿಯದೇ ಹರಿದ, ಸ್ಟಿಕ್ಕರ್ ಅಂಟಿಸಿದ ನೋಟು ನಮ್ಮ ಕೈ ಸೇರಿರುತ್ತೆ. ಅದನ್ನು ನಿರ್ವಹಣೆ ಮಾಡುವುದೇ ಸವಾಲು. ಹಾಗಂತ ಟೆನ್ಷನ್ ಆಗುವ ಅಗತ್ಯವಿಲ್ಲ. ಹರಿದ ಇಲ್ಲವೇ ಸ್ಟಿಕ್ಕರ್ ಅಂಟಿಸಿದ ನೋಟನ್ನು ಬದಲಾಯಿಸಲು RBI ನಿಯಮಗಳಿವೆ.
ಹರಿದ ನೋಟನ್ನು ಬದಲಾಯಿಸುದು ಹೇಗೆ?
ನಿಮ್ಮ ಹರಿದ ನೋಟಿನಲ್ಲಿ ಆ ನೋಟಿನ ಸೀರಿಯಲ್ ಸಂಖ್ಯೆ ಇದ್ದರೆ ಅದನ್ನು ಬದಲಾಯಿಸುದು ಸುಲಭ.
ನೋಟು ಸಂಪೂರ್ಣ ಚಿಂದಿಯಾಗಿದ್ದು, ಸೀರಿಯಲ್ ಸಂಖ್ಯೆ ಇರುವ ಭಾಗವೇ ಇಲ್ಲದಿದ್ದರೆ ನಿಮ್ಮ ನೋಟನ್ನು ಬದಲಾಯಿಸಲು ಸಾಧ್ಯವಿಲ್ಲ.
ಹರಿದ ಅಥವಾ ಸ್ಟಿಕರ್ ಅಂಟಿಸಿದ ನೋಟನ್ನು ಒಂದು ಅರ್ಜಿಯೊಂದಿಗೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗೆ ನೀಡಿದರೆ ಅದೇ ಮೊತ್ತವನ್ನು ನಿಮಗೆ ಬ್ಯಾಂಕ್ ವಾಪಸ್ ನೀಡುತ್ತದೆ.
ನೋಟು ಬದಲಾಯಿಸಲು ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ, ನೀವು ಸರ್ಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವಾ RBI ಯ ಇಶ್ಯೂ ಆಫೀಸ್‌ಗೆ ಹೋಗುವ ಮೂಲಕ ಕರೆನ್ಸಿ ಚೆಸ್ಟ್ ಅನ್ನು ಬದಲಾಯಿಸಬಹುದು.