ಈ ಯುವತಿ Bsc ಪದವೀಧರೆ; ಆದರೆ ಜೀವನ ನಡೆಸಲು ಈಕೆ ಮಾಡುತ್ತಿದ್ದ ಕೆಲಸ ಏನು ಗೊತ್ತಾ?
Sunday, November 21, 2021
ವಾರಣಾಸಿ: ಇಲ್ಲಿನ ಅಸ್ಸಿ ಘಾಟ್‌ನಲ್ಲಿ ಯುವತಿಯೋರ್ವಳು ಬಿಕ್ಷೆ ಬೇಡುತ್ತಿದ್ದಳು. ಆಕೆ ಸಾಧಾರಣ ಯುವತಿಯಾಗಿರಲಿಲ್ಲ. ಆಕೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು. ಇದನ್ನು ಗಮನಿಸಿ ಪ್ರಯಾಣಿಕರೋರ್ವನು ಆಕೆಯ ಬಳಿ ತೆರಳಿ ಆಕೆಯ ಹಿನ್ನೆಲೆಯ ಬಗ್ಗೆ ಅವಳಲ್ಲೇ ಕೇಳಿದ್ದಾನೆ. ಆಗ ಅಚ್ಚರಿಯ ವಿಚಾರವನ್ನು ಆ ಯುವತಿ ಹೊರ ಹಾಕಿದ್ದಾಳೆ. ಅವಳು ಸಾಮಾನ್ಯ ಬಿಕ್ಷುಕಳಾಗಿರಲಿಲ್ಲ. ಅವಳು ಬಿಎಸ್ಸಿ ಪದವೀಧರೆಯಾಗಿದ್ದಳು.
ಪ್ರಯಾಣಿಕನು ಅವಳ ಬಳಿ ತೆರಳಿ ವೀಡಿಯೋ ಮಾಡಿದ್ದು, ಆಕೆ ಇಂಗ್ಲಿಷ್ ನಲ್ಲಿ ಮಾತನಾಡಿರುವುದು ಸಂಪೂರ್ಣವಾಗಿ ರೆಕಾರ್ಡ್ ಆಗಿದೆ.
ತನ್ನನ್ನು ಸ್ವಾತಿ ಎಂದು ಪರಿಚಯಿಸಿರುವ ಯುವತಿ, ತಾನು ಬಿಎಸ್ಸಿ ಕಂಪ್ಯೂಟರ್ ಸಯನ್ಸ್ ಪದವೀಧರೆ ಎಂದಿದ್ದಾಳೆ. ಕಳೆದ ಮೂರು ವರ್ಷಗಳಿಂದ ವಾರಣಾಸಿಯಲ್ಲಿ ಭಿಕ್ಷೆ ಬೇಡುತ್ತಿದ್ದೇನೆ.
ವಿದ್ಯಾಭ್ಯಾಸದ ಬಳಿಕ ಮದುವೆಯಾದ ಸ್ವಾತಿ ಒಂದು ಮಗುವಿಗೆ ಜನ್ಮ ನೀಡಿದ ಬಳಿಕ ಬಲಗೈ ಪಾರ್ಶ್ವವಾಯು ಪೀಡಿತವಾಗಿತ್ತು. ಬಳಿಕ ಆಕೆಯ ಮನೆಯವರು ಆಕೆಯನ್ನು ಹೊರಹಾಕಿದ್ದಾರೆಂದು ಆಕೆ ಹೇಳಿಕೊಂಡಿದ್ದಾಳೆ.