
Tamil Nadu ಸರಕಾರದ ಈ ಕಾನೂನು ಒಂಟಿ ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲಿದೆ
Friday, November 5, 2021
ಚೆನ್ನೈ: ಅವಿವಾಹಿತ, ಪತಿ ಅಥವಾ ಕುಟುಂಬದಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ತಮಿಳುನಾಡು ಸರಕಾರವು ವಿಶೇಷ ಪರಿಗಣನೆಯಲ್ಲಿ ಮಹಿಳೆಯರು ಇನ್ನು ಮುಂದೆ ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿಗಳನ್ನು ಪಡೆಯಬಹುದು ಎಂದಿದೆ.
ತಮಿಳುನಾಡು ಸರ್ಕಾರವು ಕೈಗೊಂಡಿರುವ ಈ ನಿರ್ಧಾರವು ಮಹಿಳೆಯರ ಬದುಕಿನಲ್ಲಿ ಅತಿ ಮುಖ್ಯವಾದ ಪಾತ್ರ ನಿರ್ವಹಿಸಲಿದ್ದು, ಪತಿಯಿಂದ ಅಥವಾ ಕುಟುಂಬದಿಂದ ದೂರವಿರಲು ಬಯಸಿ ಆರ್ಥಿಕ ಕಾರಣದಿದ ಬೇರ್ಪಡಲಾಗದ ಮಹಿಳೆಯರಿಗೆ ಪೂರಕವಾಗಲಿದೆ.
ಇನ್ಮುಂದೆ ಒಂಟಿ ಮಹಿಳೆಯರೂ ಇತರರಂತೆ ಪಡಿತರ ಚೀಟಿ ಪಡೆಯಲು ಅರ್ಜಿ ಸಲಿಸಬಹುದು. ಹೊಸ ಕಾರ್ಡ್ ಪಡೆಯಲು ಅರ್ಜಿದಾರರು ಗ್ಯಾಸ್ ಸಂಪರ್ಕ ಹೊಂದಿರುವ ಅಡುಗೆ ಮನೆ ಅಥವಾ ಇತರ ಅಡುಗೆ ಸೌಲಭ್ಯವನ್ನು ಹೊಂದಿರಬೇಕು. ತನ್ನ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಬಿಲ್ ವಿವರಗಳೊಂದಿಗೆ ಒಂಟಿಯಾಗಿ ವಾಸಿಸುವವ ವಿವರಗಳನ್ನು ಲಿಖಿತವಾಗಿ ಸ್ಥಳೀಯಾಡಳಿತಕ್ಕೆ ಸಲ್ಲಿಸಬೇಕು. ಬಳಿಕ ಕಂದಾಯ ನಿರೀಕ್ಷಕರು ಪರಿಶೀಲಿಸಿ ಕಾರ್ಡ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.