ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಿಢೀರ್ ಕುಸಿಯಲು ನೈಜ ಕಾರಣವೇನು ಗೊತ್ತಾ?
Friday, November 5, 2021
ಬೆಂಗಳೂರು: ಇದೀಗ ಎಲ್ಲೆಡೆ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆಯಾದದ್ದೇ ಸುದ್ದಿ. ಏಕಾಏಕಿ ತೈಲದ ಅಬಕಾರಿ ಸುಂಕ ಇಳಿಕೆಯಾಗಿರುವುದು ಕೇಂದ್ರ ಮತ್ತು ರಾಜ್ಯಸರಕಾರಗಳ ದೀಪಾವಳಿ ಗಿಫ್ಟ್ ಎಂದು ಮಾಧ್ಯಮಗಳು ಬಿಂಬಿಸಿತ್ತು.
ಆದರೆ ತೈಲ ಬೆಲೆ ಇಳಿಕೆಗೆ ಅಸಲಿ ಕಾರಣವೇ ಬೇರೆ ಇದೆ ಎನ್ನುತಾರೆ ವಿಶ್ಲೇಷಕರು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೇ ನಡೆಯುತ್ತಿದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತಕ್ಕನುಗುಣವಾಗಿ ಇಲ್ಲಿ ತೈಲ ಬೆಲೆ ನಿರ್ಣಯವಾಗುತ್ತದೆ. ಆದರೆ ದಿಢೀರ್ ಇಳಿಕೆಯಾಗುರುವುದರ ಹಿಂದೆ ಇತ್ತೀಚೆಗೆ ದೇಶದ್ಯಂತ ನಡೆದ ಉಪ ಚುನಾವಣೆಗಳ ಫಲಿತಾಂಶ ವೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಸೇನೆಯ ಸಂಜಯ್ ರಾವತ್, ದೇಶದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿದರೆ ಪೆಟ್ರೋಲ್ ಬೆಲೆ 50 ರೂ ಗೆ ಇಳಿಯಬಹುದು. ಬಿಜೆಪಿ ಸೋಲಿನಿಂದಾಗಿ ಪೆಟ್ರೋಲ್ ಬೆಲೆ ಇಳಿದಿದೆ ಎಂದು ಹೇಳಿದ್ದಾರೆ.
ನೀವು ಬಿಜೆಪಿಯನ್ನು ಗೆಲ್ಲಿಸುತ್ತಾ ಹೋದರೆ ತೈಲ ಬೆಲೆಯೂ ಏರುತ್ತಾ ಹೋಗುತ್ತದೆ. ನಡು ನಡುವೆ ಬಿಜೆಪಿಯನ್ನು ಸೋಲಿಸಿದಾಗ ಈ ರೀತಿ ತೈಲ ಬೆಲೆಯಲ್ಲಿ ಕಡಿಮೆಯಾಗುತ್ತದೆ ಎಂದು ವಿಶ್ಲೇಷಕರೋರ್ವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಕೇಂದ್ರ ಅಬಕಾರಿ ತೆರಿಗೆ ಕಡಿತಗೊಳಿಸಿದ ಬೆನ್ನಲ್ಲೇ ಕರ್ನಾಟಕ ಸಹಿತ ಹಲವು ರಾಜ್ಯಗಳು ಸುಂಕ ಕಡಿತಗೊಳಿಸಿತ್ತು. ಇದು ಚುನಾವಣಾ ಫಲಿತಾಂಶದ ಬಳಿಕದ ನಿರ್ಧಾರ.
ಅಕ್ಟೋಬರ್ 30ರಂದು ನಡೆದ ಉಪಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಎಲ್ಲಾ 3 ವಿಧಾನಸಭಾ ಸ್ಥಾನಗಳು ಮತ್ತು ಉತ್ತರ ರಾಜ್ಯದ ಮಂಡಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತು. ಮಹಾರಾಷ್ಟ್ರದ ದೆಲ್ಗೂರ್ ವಿಧಾನಸಭಾ ಉಪಚುನಾವಣೆ ಮತ್ತು ನೆರೆಯ ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಸ್ಥಾನದ ಉಪಚುನಾವಣೆಯನ್ನೂ ಗೆಲ್ಲಲು ಬಿಜೆಪಿ ವಿಫಲವಾಗಿದೆ. ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲೂ ಬಿಜೆಪಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು.