-->
Saudi Arabia: ಹಲವು ಕ್ಷೇತ್ರಗಳಲ್ಲಿ ಸ್ವದೇಶೀಕರಣ; ಅನಿವಾಸಿ ಭಾರತೀಯರಿಗೆ ಮತ್ತೆ ಸಂಕಷ್ಟ

Saudi Arabia: ಹಲವು ಕ್ಷೇತ್ರಗಳಲ್ಲಿ ಸ್ವದೇಶೀಕರಣ; ಅನಿವಾಸಿ ಭಾರತೀಯರಿಗೆ ಮತ್ತೆ ಸಂಕಷ್ಟ

ರಿಯಾದ್: ಸೌದಿ ಅರೇಬಿಯಾದ ಅಲ್ ಬಹಾಹ್‌ನಲ್ಲಿ ಕೆಲ ಕ್ಷೇತ್ರಗಳಲ್ಲಿ ಕೆಲ ಉದ್ಯಮ ಕ್ಷೇತ್ರಗಳಲ್ಲಿ 100 ಶೇಕಡಾ ಸ್ವದೇಶಿಯರಿಗೆ ಉದ್ಯೋಗ ನೀಡಬೇಕು ಎಬ ನಿಯಮದ ಸಹಿತ ಹಲವು ಕ್ಷೇತ್ರಗಳಲ್ಲಿ ಭಾಗಶಃ ಸ್ವದೇಶಿಯರಿಗೆ ಉದ್ಯೋಗ ನೀಡಬೇಕು ಎಂದು ಅಲ್ಲಿನ ಸಚಿವಾಲಯ ತೀರ್ಮಾನಿಸಿದೆ.
ಒಟ್ಟು 11 ಕ್ಷೇತ್ರಗಳಲ್ಲಿ ಈ ತೀರ್ಮಾನಕ್ಕೆ ಅಲ್ಲಿನ ಮಾನವ ಅಭಿವೃದ್ಧಿ ಸಚಿವಾಲಯ ಕ್ರಮ ಕೈಗೊಂಡಿದ್ದು, ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ.

ಈ ನಿಯಮದಂತೆ ರೀಟೈಲ್ ಅಂಗಡಿಗಳಲ್ಲಿ ಶೇ. 100ರಷ್ಟು ಸೌದಿ ಪ್ರಜೆಗಳಿಗೆ ಮಾತ್ರ ಅವಕಾಶ. 

ಕೆಫೆಗಳಲ್ಲಿ ಶೇಕಡಾ 50 ಮತ್ತು ರೆಸ್ಟೋರೆಂಟ್ ‌ಗಳಲ್ಲಿ ಶೇಕಡಾ 40ರಷ್ಟು ಸೌದಿ ಪ್ರಜೆಗಳಿಗೆ ಉದ್ಯೋಗ ನೀಡಬೇಕೆಂದು ಸಚಿವಾಲಯ ಷರತ್ತು ವಿಧಿಸಿದೆ.

ಕ್ಲೀನಿಂಗ್, ಲೋಡಿಂಗ್ & ಅನ್‌ಲೋಡಿಂಗ್ ಮತ್ತು ಡ್ರೈವಿಂಗ್ ಕ್ಷೇತ್ರಗಳ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಶೇಕಡಾ 100ರಷ್ಟು ಸ್ವದೇಶೀಕರಣಕ್ಕೆ ತೀರ್ಮಾನಿಸಲಾಗಿದೆ.

ಈ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರು ಕೆಲಸ ನಿರ್ವಹಿಸುತ್ತಿದ್ದು, ಈ ನಿಯಮ ಜಾರಿಗೆ ಬಂದಲ್ಲಿ ಸಾವಿರಾರು ಭಾರತೀಯರು ಕೆಲಸ ಕಳೆದುಕೊಳ್ಳಲಿದ್ದಾರೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99