ಪಾಕಿಸ್ಥಾನದ ಶಾಸಕಿಯ 'ಆ ನೋಡಲಾಗದ' ವೀಡಿಯೋ ಲೀಕ್: ಕುತಂತ್ರದ ಹಿಂದೆ ಯಾರು?
Monday, November 22, 2021
ಕರಾಚಿ: ಪಾಕಿಸ್ತಾನದ, ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಝ್ ಪಕ್ಷದ ಶಾಸಕಿಯದ್ದು ಎನ್ನಲಾಗುವ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಶಾಸಕಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತಕ್ಷಿಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಸಾನಿಯಾ ಆಶಿಖ್ ಅವರನ್ನು ಹೋಲುವ ವಿಡಿಯೋ ಅಶ್ಲೀಲ ವೀಡಿಯೋ ಇದಾಗಿದ್ದು, ಇದೀಗ ಎಲ್ಲಡೆ ವೈರಲ್ ಆಗಿದೆ.
ಈ ವೀಡಿಯೋ ಮತ್ತು ನನಗೆ ಯಾವುದೇ ಸಂಬಂಧ ಇಲ್ಲ ಎಂದಿರುವ ಶಾಸಕಿ ಸಾನಿಯಾ ಆಶಿಖ್, ನನ್ನ ತೇಜೋವಧೆ ಮಾಡಲು ಯಾರೋ ದುಷ್ಕರ್ಮಿಗಳು ವಿರೋಧ ಪಕ್ಷದವರು ಈ ಕೃತ್ಯ ನಡೆಸಿದ್ದಾರೆ ಎಂದಿದ್ದಾರೆ.
ಈ ವಿಡಿಯೋದಲ್ಲಿ ಇರುವುದು ಸಾನಿಯಾ ಆಶಿಖ್ ಹೌದೋ ಅಲ್ಲವೋ ಎಂದು ಪರಿಶೀಲಿಸುತ್ತಿರುವ ಪೊಲೀಸರು, ಈ ನಡುವೆ ಶಾಸಕಿಯ ದೂರಿನ ಮೇರೆಗೆ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.