ಕೇಂದ್ರದ ಬೆನ್ನಲ್ಲೇ ರಾಜ್ಯದಲ್ಲೂ petrol- diesel ಅಬಕಾರಿ ಶುಲ್ಕ ಇಳಿಕೆ - ಇನ್ನು ಕರ್ನಾಟಕದಲ್ಲಿ ಎಷ್ಟು ರುಪಾಯಿಗೆ ಪೆಟ್ರೋಲ್ ಸಿಗುತ್ತೆ ಗೊತ್ತಾ
Thursday, November 4, 2021
ಬೆಂಗಳೂರು: ಅಚ್ಚರಿಯ ಬೆಳವಣೆಗೆಯಲ್ಲಿ ಕೇಂದ್ರ ಸರಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಿದ್ದು, ಡೀಸೆಲ್ ಮೇಲೆ 10 ರೂ ಮತ್ತು ಪೆಟ್ರೋಲ್ ಮೇಲೆ 5 ರೂ ತೆರಿಗೆ ಕಡಿಮೆ ಮಾಡಲಾಗಿದೆ.
ಇದರ ಬೆನ್ನಲ್ಲೇ ಮುಖ್ಯ ಮಂತ್ರಿ ಬೊಮ್ಮಾಯಿ ಕೂಡಾ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಶುಲ್ಕವನ್ನು ತಲಾ 7 ರೂಪಾಯಿಯಂತೆ ಕಡಿಮೆಗೊಳಿಸಿದ್ದಾರೆ.
ತೈಲದ ಮೇಲಿನ ಶುಲ್ಕ ಕಡಿಮೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಯನ್ನು ಅಭಿನಂದಿಸಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ "ಕರ್ನಾಟಕ ರಾಜ್ಯ ಸರಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ದರಿಸಿದೆ.
ಈ ನಮ್ಮ ನಿರ್ದಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ." ಎಂದಿದ್ದಾರೆ.
"ರಾಜ್ಯ ಸರಕಾರದ ಈ ನಿರ್ದಾರ ನಾಳೆ ಸಾಯಂಕಾಲದಿಂದ ಅನ್ವಯವಾಗುವುದು.
ಇದು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ.
ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.' ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.