
ಸಂಬಳ ಸಾಕಾಗುತ್ತಿಲ್ಲವೆಂದು ಕಳ್ಳತನಕ್ಕೆ ಇಳಿದ Civil engineer
Wednesday, November 3, 2021
ನಾಗಪುರ: ತನ್ನ ಪ್ರೇಯಸಿಯ ಜೊತೆಗಿನ ಐಶಾರಾಮಿ ಜೀವನಕ್ಕೆ ಸಂಬಳ ಸಾಕಾಗುತ್ತಿಲ್ಲ ಎಂದು ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್ ಓರ್ವ ಇದೀಗ ಪೊಲೀಸರ ಅತಿಥಿಯಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
27ರ ಹರೆಯದ ಉಮೇಶ್ ಪಾಟೀಲ್ 2015ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಬಳಿಕ ಕಾಂಟ್ರಾಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಉತ್ತಮ ಸಂಬಳ ಇದ್ದ ಉಮೇಶ್ ಒಳ್ಳೆಯ ಜೀವನ ನಡೆಸುತ್ತಿದ್ದ.
ಆದರೆ ಯಾವಾಗ ಆತನ ಜೀವನಕ್ಕೆ ಗರ್ಲ್ ಫ್ರೆಂಡ್ ಎಂಟ್ರಿಯಾದಳೋ ಮತ್ತೆ ಆತನ ಶೈಲಿಯೇ ಬದಲಾಗಿತ್ತು.
ಆಕೆಯೊಂದಿಗಿನ ಐಶಾರಾಮಿ ಜೀವನಕ್ಕೆ ಈ ಸಂಬಳ ಸಾಲದೇ ಹೋಯಿತು. ಅದಕ್ಕೆ ಉಮೇಶ ಕಂಡುಕೊಂಡ ದಾರಿಯೇ ಸರಗಳ್ಳತನ.
ಇದಕ್ಕಾಗಿ ಆತ ಸುಮಾರು 40ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದಾನೆ. ಏಕಾಂಗಿಯಾಗಿ ಸರಗಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸಿದ್ದ. ಇದರಿಂದ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆದ ಉಮೇಶ್ ಪಾಟೀಲ್, ಹೆಸರಿಗೆ ಮಾತ್ರ ಸಿವಿಲ್ ಎಂಜಿನಿಯರಿಂಗ್ ಕಾಟ್ಪಾಂಕ್ಟ್ ಕೆಲಸವೊಂದನ್ನು ಇಟ್ಟುಕೊಂಡಿದ್ದ.
ಈ ಬಗ್ಗೆ ಮಾಹಿತಿ ದೊರೆತ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು. ಇದಕ್ಕಾಗಿ ಆತನ ಪರ್ಮನೆಂಟ್ ಅಡ್ಡೆಯಲ್ಲಿ ಪೊಲೀಸರು ಕಾದು ಕುಳಿತಿದ್ದರು.
ಅಲ್ಲಿ ಮಹಿಳೆ ಸರದ ಮೇಲೆ ಕಣ್ಣಿಟ್ಟದ್ದ ಉಮೇಶ್, ಇನ್ನೇನು ಸರ ಕದ್ದು ಎಗರಿಸಬೇಕು ಅನ್ನುವಷ್ಟರಲ್ಲೆ ಪೊಲೀಸರು ಉಮೇಶ್ ಪಾಟೀಲ್ ವಾಹನವನ್ನು ಅಡ್ಡಗಟ್ಟಿ ನೆಲಕ್ಕುರುಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.