ಮದುವೆಯಾದ ನೋಬೆಲ್ ಪುರಸ್ಕೃತೆ ಮಲಾಲಾ: ಯಾರ ಜೊತೆ ಗೊತ್ತಾ?
Wednesday, November 10, 2021
ಬರ್ಮಿಂಗ್ಹ್ಯಾಮ್: ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನ ಮೂಲದ ಮಲಾಲಾ ಯೂಸುಫ್ ಝಾಯ್ ನಿನ್ನೆ ವಿವಾಹಿತರಾಗಿದ್ದಾರೆ.
ಈ ವಿಚಾರವನ್ನು ಸ್ವತಃ ಮಲಾಲಾ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಇವತ್ತು ನನ್ನ ಜೀವನದಲ್ಲಿ ಅತ್ಯಮೂಲ್ಯ ದಿನ. ಅಸರ್ ಮತ್ತು ನಾನು ಮದುವೆಯಾಗಿದ್ದೇವೆ. ಬರ್ಮಿಂಗ್ಹ್ಯಾಮ್ ನಲ್ಲಿರುವ ನಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸಣ್ಣ ನಿಖಾ ಕಾರ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಿಮ್ಮ ಪ್ರಾರ್ಥನೆ ಇರಲಿ. ಮುಂದಿನ ದಿನಗಳಲ್ಲಿ ಜೊತೆಯಾಗಿ ಜೀವಿಸಲು ನಾವು ಆವೇಶಭರಿತರಾಗಿದ್ದೇವೆ" ಎಂದು ಮಲಾಲಾ ಟ್ವೀಟ್ ಮಾಡಿದ್ದಾಳೆ.
ಮದುಮಗ ಯಾರು?: ಪಾಕಿಸ್ತಾನ ಕ್ರಿಕೆಟ್‌ನ ಹೈ ಪರ್ಫಾಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ಅಸರ್ ಮಾಲಿಕ್ ಮಲಾಲಾರನ್ನು ವರಿಸಿದ ಯುವಕ