
Liver cancer ಗೆ ನಮ್ಮಲ್ಲೇ ಇದೆ ಮದ್ದು: ಈ ಕೇರಳದ ಸಂಶೋಧನೆಗೆ ಅಮೇರಿಕಾದಿಂದಲೂ ಸಿಕ್ತು ಒಪ್ಪಿಗೆ
Sunday, November 7, 2021
ತಿರುವನಂತಪುರಂ: ಕೇರಳದಲ್ಲಿ ಸಾಮಾನ್ಯವಾಗಿ ಸಿಗುವ ಕಾಗೆ ಹಣ್ಣಿನ ಗಿಡದಲ್ಲಿ ಲಿವರ್ ಕ್ಯಾನ್ಸರ್ ಗೆ ಔಷಧೀಯ ಅಂಶ ಹೊಂದಿದ್ದು, ಇದರ ಸಂಶೋಧನೆಗಾಗಿ ಅಮೇರಿಕಾದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (ಎಫ್‌ಡಿಎ) ಸಂಸ್ಥೆಯು ಒಪ್ಪಿಗೆಯನ್ನು ನೀಡಿದೆ.
ರಾಜೀವ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ವಿಜ್ಞಾನಿಗಳ ತಂಡದ ಸಂಶೋಧನೆಗಾಗಿ ಅಮೆರಿಕಾದ ಸಂಸ್ಥೆಯಿಂದ ಈ ಅನುಮೋದನೆ ದೊರೆತಿದೆ.
ಈ ಸಂಶೋಧನೆಯು ಅಪರೂಪದ ಖಾಯಿಲೆಗಳಿಗೆ ಪ್ರಯೋಜನಕಾರಿಯಾಗಲಿದೆ ಎಂದು ಎಫ್‌ಡಿಎ ಹೇಳಿದೆ. ಅಲ್ಲದೇ ಈ ಔಷಧಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುದು ಎಂದು ಮಾಹಿತಿ ನೀಡಿದೆ.
ಕಾಗೆ ಹಣ್ಣಿನ ಎಲೆಯಿಂದ ಈ ಔಷಧೀಯ ಅಂಶವನ್ನು ಬೇರ್ಪಡಿಸಲಾಗಿದ್ದು, ಲಿವರ್ ಕ್ಯಾನ್ಸರ್ ಗೆ ಸದ್ಯ ಲಭ್ಯವಿರುವ ಔಷಧಿಗಿಂತ ಇದು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ತಿಳಿಸಿದೆ.