Cyber ವಂಚಕರ ಮೂಲಕ ಕಳೆದುಕೊಂಡ ಹಣವನ್ನು ಒಂದು ಫೋನ್ ಕಾಲ್‌ನಲ್ಲೇ ಮರಳಿ ಪಡೆದ ನಿವೃತ್ತ ಡಿಜಿಪಿ
Friday, November 5, 2021
ಬೆಂಗಳೂರು: ಇತ್ತೀಚೆಗೆ ಸೈಬರ್ ವಂಚಕರ ಕರೆಗೆ ಪ್ರತಿಕ್ರಯಿಸಿ, ಅವರ ಜೊತೆ OTP ಹಂಚಿ ಹಣ ಕಳೆದುಕೊಂಡಿದ್ದ ನಿವೃತ್ತ ಡಿಜಿಪಿ ಶಂಕರ್ ಬಿದರಿ ಆ ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
OTP ಶೇರ್ ಮಾಡುವ ಮೂಲಕ ಹಣ ಕಳೆದುಕೊಂಡಿದ್ದ ಶಂಕರ್ ಬಿದರಿ ಬಳಿಕ ಈ ಕುರಿತು ದೂರನ್ನೂ ದಾಖಲಿಸಿದ್ದರು.
ಆದರೆ ಇತ್ತೀಚೆಗೆ ಸೈಬರ್ ವಂಚಕರಿಗೆ ಸ್ವತಃ ತಾವೇ ಕರೆ ಮಾಡಿದ್ದ ಬಿದರಿ ವಂಚನೆ ಮೂಲಕ ಪಡೆದ ಹಣವನ್ನು ಮತ್ತೆ ಖಾತೆಗೆ ಹಿಂತಿರುಗಿಸಬೇಕು. ಇಲ್ಲವಾದರೆ ಎಲ್ಲೇ ಇದ್ದರೂ ತಕ್ಕ ಶಾಸ್ತಿ ಮಾಡುವುದಾಗಿ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದರು.
ನಿವೃತ್ತ ಡಿಜಿಪಿಯ ಕರೆಯಿಂದ ವಿಚಲಿತರಾದ ವಂಚಕರು, ತಮಗೆ ಉಳಿಗಾಲವಿಲ್ಲ ಎಂಬುದನ್ನು ಅರಿತು, ಕೂಡಲೇ ಲಪಟಾಯಿಸಿದ್ದ 89 ಸಾವಿರ ರೂ.ನ್ನು ಮತ್ತೆ ಅದೇ ಅಕೌಂಟ್ ಗೆ ಜಮಾಯಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗೆ SBIಯಿಂದ ಕರೆ ಮಾಡುವುದೆಂದು ಹೇಳಿ ವಂಚಕರು ಕರೆ ಮಾಡಿದ್ದು PAN ಕಾರ್ಡ್ ಅಪ್ಡೇಟ್ ಮಾಡುವುದಾಗಿ ಹೇಳಿ OTP ಪಡೆದು ಶಂಕರ್ ಬಿದರಿ ಅಕೌಂಟ್ ನಿಂದ 89 ಸಾವಿರ ರೂ. ಎಗರಿಸಿದ್ದರು.