
Judge ತೀರ್ಪು ನೀಡುತ್ತಿದ್ದಂತೆ ಪ್ರಾಸಿಕ್ಯೂಟರ್‌ಗೆ ಕೋರ್ಟ್ ನಲ್ಲೇ ಕೊಲೆ ಬೆದರಿಕೆ ಹಾಕಿದ ಅಪರಾಧಿಗಳು
ಆಲಪ್ಪುಝ/ ಕೇರಳ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ 5 ಮಂದಿ ಅಪರಾಧಿಗಳ ಪೈಕಿ ಮೂರು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕೆರಳಿದ ಅಪರಾಧಿಗಳು ಕೋರ್ಟ್ ನಲ್ಲೇ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಆಲಪ್ಪುಝದ ಜಿಲ್ಲಾ ಅಡೀಶನಲ್ ಸೆಶನ್ ಕೋರ್ಟ್ ನಲ್ಲಿ ನಡೆದಿದೆ.
2014ರಲ್ಲಿ ನಡೆದ ಇ ಜಯೇಶ್ ಎಂಬ ವ್ಯಕ್ತಿಯ ಕೊಲೆ ಸಂಬಂಧ ತೀರ್ಪಾಗಿತ್ತು ಅದು. ಐದು ಮಂದಿ ಅಪರಾಧಿಗಳ ಪೈಕಿ ಮೂವರಿಗೆ ಜೀವಾವಧಿ ಮತ್ತು ಇಬ್ಬರಿಗೆ ಎರಡು ವರ್ಷಗಳ ಸಜೆ ವಿಧಿಸಿತ್ತು.
ವಿಧಿ ಪ್ರಕಟಿಸುತ್ತಿದ್ದಂತೆ ಕೆರಳಿದ ಜೀವಾವಧಿ ವಿಧಿಸಲ್ಪಟ್ಟ ಅಪರಾಧಿಗಳು ಅಲ್ಲೇ ಪಬ್ಲಿಕ್ ಪ್ರಾಸಿಕ್ಯೂಟರ್‌ನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಅವರ ಕರ್ತವ್ಯ ನೋಡುತ್ತಿದ್ದ ಪೊಲೀಸರನ್ನೂ ಅವಾಚ್ಯವಾಗಿ ನಿಂದಿಸಿದ್ದೂ, ಪೊಲೀಸ್ ಬಸ್ ಹತ್ತುವ ವೇಳೆಯೂ ಅನುಚಿತವಾಗಿ ವರ್ತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.