ಪುನೀತ್ ನಿಧನ ಹಿನ್ನೆಲೆ: ಯುವಕರಲ್ಲಿ ಮೂಡಿದ ಆತಂಕ: ಜಿಮ್‌ಗೆ ಹೋಗಲು ಹಿಂದೇಟು
Tuesday, November 2, 2021
ಬೆಂಗಳೂರು: ಪುನೀತ್ ರಾಜ್‌ಕುಮಾರ್ ನಿಧನ ಹೃದಯಸ್ಥಂಭನದಿಂದ ಆಗಿದೆಯೆಂಬ ಹಿನ್ನೆಲೆಯಲ್ಲಿ ಯುವಕರಲ್ಲೀಗ ಆತಂಕ ಶುರುವಾಗಿದೆ. ಅತಿಯಾದ ವರ್ಕೌಟ್ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದರಿಂದಾಗಿ ಸಾವು ಸಂಭವಿಸುತ್ತದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಾದ್ಯಂತ ಹಲವು ಜಿಮ್‌ಗಳಲ್ಲಿ ಯುವಕರು ಬರುವುದು ಕಡಿಮೆಯಾಗಿದೆ.
ಈ ನಡುವ ಸಚಿವ ಸುಧಾಕರ್ ಈ ಬಗ್ಗೆ ಚರ್ಚಿಸಿ ಜಿಮ್‌ಗಳಿಗೆ ಸುತ್ತೋಲೆ ಕಳುಹಿಸಕಾಗುವುದು ಎಂದು ಇತ್ತೀಚಿಗೆ ಹೇಳಿದ್ದರು.
ಇದೇ ರೀತಿಯ ಅಭಿಪ್ರಾಯವನ್ನು ಕೆಲದಿನಗಳ ಹಿಂದೆ ಕೇರಳ ಸರಕಾರವೂ ಹೇಳಿತ್ತು.
ಒಟ್ಟಿನಲ್ಲಿ ಬಾಡಿ ಫಿಟ್ನೆಸ್ ಗೆಂದು ಜಿಮ್‌ಗೆ ಹೋಗುವವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.